ವಾರ್ಷಿಕ ಸಮಾವೇಶ

0
612

ನಮ್ಮ ಪ್ರತಿನಿಧಿ ವರದಿ
ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ.) ವತಿಯಿಂದ ಸ್ವ-ಸಹಾಯ ಸಂಘಗಳ ವಾರ್ಷಿಕ ಸಮಾವೇಶ ಡಿ.11ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.
 
 
ಮೂಡುಬಿದಿರೆ ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ದೀಕ್ಷಿತ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ.) ಅಧ್ಯಕ್ಷ ಪ್ರೊ.ಎಂ ವಾಸುದೇವ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
 
 
 
ಮುಖ್ಯ ಅತಿಥಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್ ಭಾಗವಹಿಸಲಿದ್ದಾರೆ. ಆಳ್ವಾಸ್ ಸಮಾಜ ಕಾರ್ಯ ಕಾಲೇಜಿನ ಡಾ.ಮಧುಮಾಲ ಅವರು ‘ಇಂದಿನ ಕುಟುಂಬ ವ್ಯವಸ್ಥೆ ಮತ್ತು ಮೌಲ್ಯಗಳು’ ಎಂಬ ವಿಷಯ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
 
 
 
ಸಮಾರೋಪ ಸಮಾರಂಭ:
ಅಂದೇ ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ.) ಅಧ್ಯಕ್ಷ ಪ್ರೊ.ಎಂ ವಾಸುದೇವ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್ ಹಾಗೂ ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ.) ನಿರ್ದೇಶಕ ರಾಜೇಶ್ ಬಂಗೇರ ಬಹುಮಾನ ವಿತರಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here