ವಾರ್ಷಿಕ ವರದಿ ಬಿಡುಗಡೆ

0
468

 
ಉಜಿರೆ ಪ್ರತಿನಿಧಿ ವರದಿ
ಉಜಿರೆ ರುಡ್ ಸೆಟ್ ನ 2015-16 ರ ಸಾಲಿನ ವಾರ್ಷಿಕ ವರದಿಯನ್ನು ರುಡ್ ಸೆಟ್ ಗಳ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
 
ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 2015-16 ರ ಸಾಲಿನಲ್ಲಿ 39 ವಿವಿಧ ತರಬೇತಿ ತಂಡಗಳಲ್ಲಿ 1037 ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿದ್ದಲ್ಲದೆ ಶೇ. 93ರಷ್ಟು ದುರ್ಬಲ ವರ್ಗದವರು ತರಬೇತಿ ಪಡೆದು ಶೇ.67 ಶಿಭಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲೂ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಂದುವರಿಸುವಂತೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here