ವಾರ್ತೆ

ವಾರ್ಷಿಕ ಕ್ರೀಡಾಕೂಟ

ಪುತ್ತೂರು ಪ್ರತಿನಿಧಿ ವರದಿ
ಇತ್ತೀಚೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ತನ್ನ ವಾರ್ಷಿಕ ಕ್ರೀಡಾಕೂಟವು ಕಾಲೇಜು ಕ್ಯಾಂಪಸ್ ನ ಕ್ರೀಡಾಂಗಣದಲ್ಲಿ ನಡೆಯಿತು. ಬೆಳಿಗ್ಗೆ 10ಘಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ನಿರ್ದೇಶಕರಾದ ವಾಮನ ಪೈ ಆಗಮಿಸಿದ್ದರು.
 
 
 
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ವಿಜಯನಾರಾಯಣ ಎಂ.ಕೆ. ಉಪನ್ಯಾಸಕಿಯಾದ ಅಕ್ಷತಾ ಎ.ಪಿ., ಹಾಗೂ ಕಾಲೇಜು ಕ್ರೀಡಾ ಘಟಕದ ಮುಖ್ಯಸ್ಥರಾದ , ಉಪನ್ಯಾಸಕ ರಾಜೇಂದ್ರ ಪ್ರಸಾದ್ ಎ. ಉಪಸ್ಥಿರಿದ್ದರು. ವಾಮನ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಧ್ಯೆಯ ಜೊತೆ ಆಟ ಮುಂತಾದ ಮನೋರಂಜನಾ ಚಟುವಟಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕೆಂದು ಹೇಳುತ್ತಾ , ಎಲ್ಲರಿಗೂ ದೈಹಿಕ ಆರೋಗ್ಯ ಮುಖ್ಯ ,ಅದರಲ್ಲೂ ವಕೀಲಿ ವೃತ್ತಿಯಲ್ಲಿರುವ ಕಾನೂನು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಜೊತೆ ಜೊತೆಗೆ ದೈಹಿಕ ಆರೋಗ್ಯವೂ ಬಹಳ ಮುಖ್ಯ ಎಂದು ಅಭಿಪ್ರಯಿಸಿದರು.
 
 
 
ಬಳಿಕ ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಸಂಚಾಲಕರಾದ ವಿಜಯನಾರಾಯಣ ಎಂ.ಕೆ. ಕಾಲೇಜು ಶಿಕ್ಷಣ ಮಾತ್ರವಲ್ಲದೇ ಕ್ರೀಡೆ , ಮುಂತಾದ ಚಟುವಟುಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸೋಲು ಗೆಲುವೆಂಬುದು ಸದಾ ಇರುವಂಥದ್ದೆ, ಆದರೆ ಇದನ್ನು ಒಂದೇ ರೀತಿಯಲ್ಲಿ ಸಮನಾಗಿ ಸಕಾರಾತ್ಮಕವಾಗಿ ಸ್ವೀಕಾರಿಸಬೇಕೆಂದು ಹೇಳಿ ಶುಭ ಹಾರೈಸಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕಾಲೇಜು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಅಭಿಪ್ರಯಿಸಿದರು.
 
 
 
ಕ್ರೀಡಾ ಕಾರ್ಯದರ್ಶಿಯಾದ ಶಶಿಕುಮಾರ್ ಕ್ರೀಡಾ ಪ್ರತಿಜ್ವೆಯನ್ನು ಬೋಧಿಸಿದರು. ತದನಂತರ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಎ ಧನ್ಯವಾದವನ್ನರ್ಪಿಸಿದರು. ದೈಹಿಕ ನಿರ್ದೇಶಕರುಗಳಾದ ರವಿಶಂಕರ್, ನವೀನ್ ಕುಮಾರ್, ಯತೀಶ್ ಇವರು ಕಾಲೇಜು ಉಪನ್ಯಾಸಕ/ಉಪನ್ಯಾಸಕೇತರ ಬಂಧುಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ತೇಜಸ್ ನಿರೂಪಿಸಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here