ವಾರ್ಷಿಕ ಉತ್ಸವಕ್ಕೆ ಇಂದು ಚಾಲನೆ

0
252

ಮಡಿಕೇರಿ ಪ್ರತಿನಿಧಿ ವರದಿ
ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ರಾಜ್ಯದ ಏಕೈಕ ದೇವಾಲಯವಾಗಿರುವ ಶ್ರೀಮೃತ್ಯುಂಜಯ ದೇವಾಸ್ಥಾನದ ವಾರ್ಷಿಕ ಉತ್ಸವಕ್ಕೆ ತಾ.7 ರಿಂದ ಚಾಲನೆ ದೊರೆಯಲಿದೆ.
 
 
 
ತಾ.7 ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕ ಉತ್ಸವ ಆರಂಭಗೊಳ್ಳಲಿದ್ದು, ತಾ.17 ರಂದು ದೇವರ ಅವಭೃತ ಸ್ನಾನ ಜರುಗಲಿದೆ.
ಈ ಅವಧಿಯಲ್ಲಿ ಎಂದಿನಂತೆ ನಿತ್ಯ ಪೂಜೆ, ತೂಚಂಬಲಿ ಉತ್ಸವ ಮೂರ್ತಿ ದರ್ಶನ ತುಲಾಭಾರ ಕೈಂಕರ್ಯಗಳು ನಡೆಯಲಿದೆ. ತಾ.16ರಂದು ಬೆಳಗ್ಗೆ 5 ಗಂಟೆಗೆ ಇರುಬಳಕು ಹರಕೆ ಬಳಕಿನ ಪ್ರಸಾದ ವಿತರಣೆ 11 ಗಂಟೆಗೆ ತುಲಾಭರ ಸಂಜೆ 5 ಗಂಟೆಗೆ ನೆರಪು, ಉತ್ಸವ ಮೂರ್ತಿ ದರ್ಶನವಿದೆ.
 
 
ಅಂತಿಮ ದಿನವಾದ ತಾ.17 ರಂದು ಬೆಳಗ್ಗೆ 10 ಗಂಟೆಯಿಂದ ನಿತ್ಯಪೂಜೆ, 12 ಗಂಟೆಗೆ ತುಲಾಭಾರ, ಮಧ್ಯಾಹ್ನ 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಸಂಜೆ 5 ಗಂಟೆಗೆ ಉತ್ಸವ ಮೂತರ್ಿ ದರ್ಶನ, ದೇವರ ಅವಭೃತ ಸ್ನಾನ, ವಸಂತ ಪೂಜೆಯೊಂದಿಗೆ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ.

LEAVE A REPLY

Please enter your comment!
Please enter your name here