'ವಾರ್ಧಾ' ಅನಾಹುತ

0
330

ಚೆನ್ನೈ ಪ್ರತಿನಿಧಿ ವರದಿ
 
UPDATED NEWS
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ 19 ಮೀನುಗಾರರು ನಾಪತ್ತೆಯಾಗಿದ್ದಾರೆ.
ಚೆನ್ನೈನಲ್ಲಿ ರೈಲು, ವಿಮಾನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಂಗಳೂರು-ಚೆನ್ನೈ ಮಧ್ಯೆ ಹಲವು ರೈಲು ಸಂಚಾರ ರದ್ದಾಗಿದೆ. ಚೆನ್ನೈ-ತಿರುವನಂತಪುರ ಸೆಂಟ್ರಲ್ ಸೂಪರ್ ಫಾಸ್ಟ್, ಚೆನ್ನೈ-ಮಂಗಳೂರು ವೆಸ್ಟ್ ಕೋಸ್ಟ್ ರೈಲು, ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರ ರದ್ದಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಚೆನ್ನೈಯಲ್ಲಿ ನಿರಾಶ್ರಿತರಿಗೆ ಅಮ್ಮ ಕ್ಯಾಂಟಿನ್ ಮೂಲಕ ಆಹಾರ ಪೂರೈಕೆ ಮಾಡಲಾಗುತ್ತಿದೆ.
 
ಬಂಗಾಳಕೊಲ್ಲಿಯಲ್ಲಿ ‘ವಾರ್ಧಾ’ ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಚೆನ್ನೈ ಸೇರಿ ಹಲವೆಡೆ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
 
 
ಮಳೆಯ ಅರ್ಭಟಕ್ಕೆ 137ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ದಿವಂಗತ ಮಾಜಿ ಸಿಎಂ ಜಯಲಲಿತಾ ನಿವಾಸ ಪೋಯಸ್ ಗಾರ್ಡನ್ ನಲ್ಲಿ 7 ಮರಗಳು ಉರುಳಿದೆ. ರಾಯಪೇಟದಲ್ಲಿ 59 ಮರ, ನುಂಗಂಬಾಕ್ಯಂನಲ್ಲಿ 20 ಮರ, ಮಂಡವೇಲಿಯಲ್ಲಿ 23, ಗೋಪಾಲಪುರಂನಲ್ಲಿ 16 ಮರಗಳು ಉರುಳಿದೆ. ಹೀಗೆ ಚೆನ್ನೈ ನಗರಾದ್ಯಂತ 137ಕ್ಕೂ ಹೆಚ್ಚು ಮರಗಳು ಧರಗುರುಳಿದೆ.
 
 
 
ಪರಿಸ್ಥಿತಿ ಎದುರಿಸಲು ಎನ್ ಡಿಆರ್ ಎಫ್ ಸರ್ವಸನ್ನದ್ಧ
ಗಾಳಿಯೂ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಇಂದು ಮಧ್ಯಾಹ್ನ 2ರಿಂದ 5 ಗಂಟೆಯೊಳಗೆ ತಮಿಳುನಾಡಿಗೆ ವಾರ್ಧಾ ಅಪ್ಪಳಿಸುವ ಸಾಧ್ಯತೆ ಇದೆ. ಈಗಾಗಲೇ ಎನ್ ಡಿ ಆರ್ ಎಫ್ ತಂಡ ಕರಾವಳಿ ತೀರದ ಪ್ರದೇಶಗಳಲ್ಲಿ ಬೀಡುಬಿಟ್ಟಿದೆ. ಎನ್ ಡಿಆರ್ ಎಫ್ ತಂಡ ಸೂಕ್ಷ್ಮ ಪ್ರದೇಶಗಳಲ್ಲಿದ್ದ 4000ಕ್ಕೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕೂಡ ಮಾಡಲಾಗಿದೆ. ಈಗ ಚಂಡಮಾರುತ 10 ಕಿಲೋ ಮೀಟರ್ ದೂರಲ್ಲಿದೆ. ಚೆನ್ನೈ ನಗರದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
 
ಚೆನ್ನೈ ಮಹಾನಗರದಲ್ಲಿ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿ, ಜನರು ಪರದಾಡುತ್ತಿದ್ದಾರೆ. ಚೆನ್ನೈನ ತಗ್ಗುಪ್ರದೇಶಗಳಿಗೆ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ನೇಪಿಯರ್ ಸೇತುವೆ ಬೃಹತ್ ಮರ ಉರುಳಿ ಬಿದ್ದಿದೆ. ಇದರಿಂದ ಸೇತುವೆಯ ಮೇಲೆ ವಾಹನ ಸಂಚಾರ ಸ‍್ಥಗಿತವಾಗಿದೆ. ಇಲ್ಲಿನ ಮೊಬೈಲ್ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತವಾಗಿದೆ.
 
 
 
ಭಾರೀ ಮಳೆ ಹಿನ್ನೆಲೆಯಲ್ಲಿ 25 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮಳೆ ಅಬ್ಬರವೇರುತ್ತಿರುವ ಹಿನ್ನೆಲೆಯಲ್ಲಿ ತಮಿಳಿನ ಸಿಎಂ ಓ ಪನ್ನೀರ್ ಸೆಲ್ವಂ ಅವರು ತುರ್ತು ಸಭೆ ಕರೆದಿದ್ದಾರೆ. ಸಚಿವಾಲಯದಿಂದಲೇ ಚಂಡಮಾರುತದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here