'ವಾರ್ಧಾ'ದಿಂದ ತತ್ತರಿಸಿದ ಚೆನ್ನೈ

0
187

ನಮ್ಮ ಪ್ರತಿನಿಧಿ ವರದಿ
ಬಂಗಾಳಕೊಲ್ಲಿಯಲ್ಲಿ ‘ವಾರ್ಧಾ’ ಚಂಡಮಾರುತ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭೀಕರ ಚಂಡಮಾರುತಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ 12ಕ್ಕೇರಿದೆ. ತಮಿಳುನಾಡು ರಾಜಧಾನಿ ಚೆನ್ನೈ ಇನ್ನೂ ಸಹಜ ಸ್ಥಿತಿಗೆ ಮರಳಲಿಲ್ಲ.
 
 
ಚೆನ್ನೈನ ವಿವಿಧ ರಸ್ತೆಗಳಲ್ಲಿ ಸಾವಿರಾರು ಮರಗಳು ಉರುಳಿ ಬಿದ್ದಿವೆ. ಚೆನ್ನೈ ನಗರಾದ್ಯಂತ 20 ಸಾವಿರ ಮರಗಳು ಧರೆಗುರುಳಿದಿದೆ. ಇದರಿಂದ ಹಲವೆಡೆ ವಾಹನ ಸಂಚಾರ ಸ್ಥಗಿತವಾಗಿದೆ. ನಿನ್ನೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುತ್ತಿದ್ದಾರೆ. ಚೆನ್ನೈ, ಕಾಂಚಿಪುರಂ, ತಿರುವಳ್ಳೂರಿನಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಬಿರುಗಾಳಿ ಹಿನ್ನೆಲೆಯಲ್ಲಿ ಬಸ್, ರೈಲು ಸಂಚಾರ ಸ್ಥಗಿತವಾಗಿದೆ. ಇನ್ನೂ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಚಂಡಮಾರುತಕ್ಕೆ 55 ಕ್ಕೂ ಹೆಚ್ಚು ಗುಡಿಸಲುಗಳು ನಾಶವಾಗಿದೆ. ನಿರಾಶ್ರಿತರ ಶಿಬಿರದಲ್ಲಿ 10 ಸಾವಿರಕ್ಕೂ ಜನರು ಆಶ್ರಯ ಪಡೆದಿದ್ದಾರೆ.
 
 
ಆಂಧ್ರದಲ್ಲಿ 2 ಸಾವು
ಆಂಧ್ರದಲ್ಲಿ ವಾರ್ಧಾ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಚಿತ್ತೂರು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆಂಧ್ರ ಪ್ರದೇಶದ ನೆಲ್ಲೂರು, ಚಿತ್ತೂರು, ಕಡಪ, ಕರ್ನೂಲ್, ಕೃಷ್ಣಾ, ಪ್ರಕಾಶಂ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಚಿತ್ತೂರು, ನೆಲ್ಲೂರಿನ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಎನ್ ಡಿ ಆರ್ ಆಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.
 
 
 
ರಾಜ್ಯದಲ್ಲೂ ಜಿಟಿಜಿಟಿ ಮಳೆ
ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಕೋಲಾರ, ಮೈಸೂರು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ದಕ್ಷಿಣ ಭಾಗದಿಂದ ವಾರ್ಧಾ ಹಾದು ಹೋಗಲಿದ್ದು, ವಾಯುವ್ಯ ಭಾಗಕ್ಕೆ ಸಾಗಲಿದೆ. ಕರ್ನಾಟಕ ವಾರ್ಧಾ ಪ್ರವೇಶಿಸುವಾಗ ಸಂಪೂರ್ಣ ದುರ್ಬಲವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
 
 
ದ.ಕ. ಜಿಲ್ಲೆಯಲ್ಲಿ ತುಂತುರು ಮಳೆ
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾರ್ಧಾ ಚಂಡಮಾರುತ ಹಿನ್ನೆಲೆಯಲ್ಲಿ ಕರಾವಳಿಯ ಹಲವು ಪ್ರದೇಶದಲ್ಲಿ ಹನಿ ಹನಿ ಮಳೆಯಾಗಿದೆ. ಇಂದು ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯ ಸಿಂಚನವಾಗಿದೆ.

LEAVE A REPLY

Please enter your comment!
Please enter your name here