ವಾರ್ಡ್‌ ನಂಬ್ರ 14ರ ಜನತೆ… ನೀವು ಓಟುಹಾಕುವ ಮುನ್ನ ಇದನ್ನು ಓದಲೇಬೇಕು…

0
607

ನಿಮಗೆ ನಿಜವಾದ ಜನಸೇವಕ ಬೇಡವೇ…? ಹಗಲಿರುಳು ನಿಮ್ಮ ಬೆನ್ನ ಹಿಂದಿರುವ ನೈಜ ಕಾಳಜಿಯ ಸಮಾಜ ಸೇವಕ ಬೇಕೇ ಅಥವಾ ಫೋಟೋಗೆ ಫೋಸ್‌ ಕೊಡುವ, ಅವಕಾಶವಾದಿ ರಾಜಕಾರಣಿಗಳು ಬೇಕೇ…? ಮತದಾರರೇ ನೀವು ಪ್ರಾಮಾಣಿಕವಾಗಿ ಚಿಂತಿಸಲೇಬೇಕು…  ಚಿಂತನೆ, ಆತ್ಮವಿಮರ್ಶೆಯನ್ನು ಮಾಡದೆ ಆಮಿಷಗಳಿಗೆ, ಸುಳ್ಳು ಹೇಳಿಕೆಗಳಿಗೆ ಬೆಲೆಕೊಡದೆ ನೈಜ ಸಮಾಜಸೇವೆಯ ನೆನಪುಗಳನ್ನು ಮರೆಯದೆ ನಿಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ. ನೈಜತೆಯನ್ನು ಮರೆಮಾಚುವ ಅಧಿಕಾರ ಧಾಹಿಗಳತ್ತ ಚಿತ್ತ ನೆಡೆದಿರಿ. ಕ್ಷಣಕಾಲದ   ತಪ್ಪು ನಿರ್ಧಾರ ಮುಂದಿನ ಐದು ವರುಷಗಳ ಕಾಲ ನಿಮ್ಮನ್ನು ಬಿಡದೆ ಕಾಡುವಂತಾಗುತ್ತದೆ. ಅಷ್ಟೇ ಏಕೆ ಕೊರಗುವಂತೆ ಮಾಡುತ್ತದೆ. ಪ್ರಾಮಾಣಿಕತೆಗೆ ಬೆಲೆ ಕೊಡುವ ಸಮಾಜಮುಖೀ ಚಿಂತನೆಗಳುಳ್ಳ ನೈಜ ಪ್ರತಿಭೆಗಳು ನಿಮ್ಮ ಆಯ್ಕೆಯಾಗಲಿ…ಹಾಗಾದರೆ ಈ ಪ್ರಮುಖ ಅಂಶಗಳತ್ತ ನೀವೊಮ್ಮೆ ಗಮನ ಹರಿಸಲೇ ಬೇಕು…

ಇದು ನಿಸ್ವಾರ್ಥ ಜನಸೇವಕ ಅಮರ್‌ ಕೋಟೆಯವರೊಂದಿಗೆ ಹಲವು ವರುಷಗಳ ಒಡನಾಟ ಹೊಂದಿರುವ ವ್ಯಕ್ತಿಯೊಬ್ಬರು ಹಂಚಿಕೊಂಡ ಅಭಿಪ್ರಾಯ. ಇದನ್ನು ಓದುಗರೆದುರು ಯಥಾವತ್‌ ಬಿಚ್ಚಿಡುತ್ತಿದ್ದೇವೆ.

ಕಳೆದ ಅನೇಕ ವರ್ಷಗಳಿಂದ ಅಮರ್ ಕೋಟೆಯವರೊಂದಿಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ. ಇಷ್ಟರ ಅವಧಿಯಲ್ಲಿ ಅವರಲ್ಲಿ ಪಕ್ಷದ ವಿರುದ್ಧವಾದ ಮನಸ್ಥಿತಿಯನ್ನು ಕಾಣಲೇ ಇಲ್ಲ. ಪ್ರತಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಹೆಸರನ್ನು ಬಳಸಿಕೊಂಡೇ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆ ಸಂದರ್ಭದಲ್ಲಿ ಪಕ್ಷಪ್ರೇಮಿಗಳು ಯಾರೂ ಇರಲಿಲ್ಲ? ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಅವರ ಹೆಸರಿನೊಂದಿಗೇ ನಾವು ಹಮ್ಮಿಕೊಂಡಿದ್ದೆವು. ಆ ಸಂದರ್ಭದಲ್ಲಿ ಪಕ್ಷಪ್ರೇಮಿಗಳು ಯಾರೂ ಇರಲಿಲ್ಲ? ಪುಲ್ವಾಮ ದಾಳಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಹುತಾತ್ಮರಿಗೆ  ಶ್ರದ್ಧಾಂಜಲಿ ಸಲ್ಲಿಸಿದ್ದೆವು. ಆ ಸಂದರ್ಭದಲ್ಲಿ ಪಕ್ಷಪ್ರೇಮಿಗಳು ಯಾರೂ ಇರಲಿಲ್ಲ? ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿ ಆಗಬೇಕೆಂಬ ದೇಶದ ಛಲಕ್ಕೆ ನಮ್ಮ ಕೊಡುಗೆ ನೀಡಬೇಕೆಂದು ಸ್ವಂತ ಖರ್ಚಿನಿಂದ ಲಕ್ಷಾಂತರ ರೂ.ವ್ಯಯಿಸಿ ಉತ್ತಮ ನಿರ್ಧೇಶಕರು ಹಾಗೂ ನಟರಿಂದ 3 ಕಿರುಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದು ಇದು 50ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಪಕ್ಷದ್ರೋಹವೇ? ಮೋದಿಯವರ ಚುನಾವಣಾ ಪ್ರಚಾರಕ್ಕೆಂದೇ ಟೀ ಶರ್ಟ್ ಖರೀದಿಸಿ ಇಡಿಯ ತಂಡವೇ ಬೀದಿಗಿಳಿದಿತ್ತು. ಈ ಕೆಲಸಕ್ಕೆ ಪಕ್ಷ ಹಣ ಕೊಟ್ಟಿತ್ತಾ? ಆದರೂ ಪಕ್ಷದ್ರೋಹಿ ಪಟ್ಟ.? ಹೌದು, ಇಷ್ಟೊಂದು ಶ್ರಮ ಪಟ್ಟಾಗ ಟಿಕೆಟ್ ನೀಡಿಲ್ಲವಲ್ಲ ಎಂಬ ಬೇಸರ ಆಗಿದ್ದು ನಿಜ. ಆದರೆ ಎಂದಿಗೂ ಪಕ್ಷವನ್ನು ದೂರುವ ಹೇಯ ಕೆಲಸವನ್ನು ನಾವೆಂದಿಗೂ ಮಾಡಿಲ್ಲ-ಮಾಡೋದೂ ಇಲ್ಲ. ಪಕ್ಷ ಎಂದಿಗೂ ನಮಗೆ ದ್ರೋಹ ಬಗೆದಿಲ್ಲ. ಆದರೆ ಪಕ್ಷದಲ್ಲಿರುವ ವ್ಯಕ್ತಿಗಳು ಅಮರ್ ಕೋಟೆಯವರ ಕೆಲಸವನ್ನು ಪರಿಗಣಿಸಬೇಕಿತ್ತು. ಪಕ್ಷ ಬಿಟ್ಟು ಪಕ್ಷೇತರರಾಗಿ ಸ್ಪರ್ಧಿಸುವುದು ತಪ್ಪೇ? ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲವೇ? ಪಕ್ಷದ್ರೋಹಿ ಎನ್ನಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಪಕ್ಷದ್ರೋಹಿ ಎಂದ ನೀವುಗಳು ಪಕ್ಷಕ್ಕಾಗಿ ಮಾಡಿದ ಸಾಧನೆ ಏನು? ಅಮರ್ ಕೋಟೆಯವರನ್ನು ಹೋದಲ್ಲಿ ಬಂದಲ್ಲಿ ಅವನ ಮೇಲೆ ಗೂಂಡಾ ಕೇಸ್ ಇದೆ ಎಂದು ಹೇಳುತ್ತಾ ಬರುತ್ತಿದ್ದೀರಿ.! ಓಪನ್ ಚಾಲೆಂಜ್, ಅವರ ಮೇಲೆ ಇರುವುದು ಸಂಘಟನೆಗೆ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಕೇಸ್ ಗಳು. ವ್ಯಯಕ್ತಿಕವಾಗಿ ಒಂದೇ ಒಂದು ಕೇಸ್ ಇದ್ದರೆ ಅಮರ್ ಚುನಾವಣಾ ಸಮರದಿಂದಲೇ ಹಿಂದೆ ಸರಿಯುತ್ತಾರೆ. ನಾವು ನಮ್ಮಷ್ಟಕ್ಕೆ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ ಕಾಲೆಳೆದು ಅಪಪ್ರಚಾರ ನಡೆಸೋದ್ಯಾಕೆ? ಬಿಜೆಪಿ ಸಹಿತ ಯಾವುದೇ ಪಕ್ಷದ ಅಭ್ಯರ್ಥಿಗಳ ವಿರುದ್ಧ ನಾವು ಮಾತನಾಡಿಲ್ಲ. ಆದರೆ ಅಮರ್ ಕೋಟೆಯವರ ಬಗ್ಗೆ ನಿಂದನಾತ್ಮಕ ಹೇಳಿಕೆಗಳು ಯಾಕೆ? ಅಮರ್ ಕೋಟೆಯವರು ಸ್ವಾರ್ಥಕ್ಕಾಗಿ, ಟಿಕೆಟ್ ಗಾಗಿ ಜವನೆರ್ ಬೆದ್ರ ಸ್ಥಾಪಿಸಿದರು ಎಂದವರಿಗೆ ಹುಚ್ಚು ಹಿಡಿದಿದೆ. ಈ ಸಂಘಟನೆಯಿಂದ ಎಷ್ಟು ಜನರಿಗೆ ಲಾಭ ಆಗಿದೆ ಎಂಬುವುದನ್ನು ನಿಮ್ಮ ಕಾಮಾಲೆ ಕನ್ನಡಕವನ್ನು ಕಳಚಿ ನೋಡಿ. ಅಮರ್ ಗೆ ಸ್ವಾರ್ಥ ಇದೆ ಎಂದಾದರೆ ಅಮರ್ ಗೆ ಸೀಟು ಬಿಟ್ಟು ಕೊಡದವರಿಗೆ ಸ್ವಾರ್ಥ ಇಲ್ಲವೇ? ಸ್ವಾರ್ಥ ತಪ್ಪಲ್ಲ, ಆದರೆ ಮತ್ತೊಬ್ಬರನ್ನು ಟೀಕಿಸುವುದು ತಪ್ಪು. ಸಮಯ ಎಲ್ಲರನ್ನೂ ಆಟ ಆಡಿಸುತ್ತೆ. ಯಡಿಯೂರಪ್ಪ, ಶ್ರೀರಾಮುಲು, ಶೋಭಾ ಕರಂದ್ಲಾಜೆ,ಕೇಶುಭಾಯಿ ಪಟೇಲ್ ಹೀಗೆ ಅನೇಕ ನಾಯಕರು ಪಕ್ಷ ಬಿಟ್ಟು ಹೋಗಿ ಮತ್ತೆ ಮರಳಿ ಬಂದಿದ್ದಾರೆ. ಅಮರ್ ಕೋಟೆಯವರಿಗೆ ಅಷ್ಟೊಂದು ಅಧಿಕಾರದ ಹುಚ್ಚು ಇರುತ್ತಿದ್ದರೆ ಇತರೆ ಪಕ್ಷದಿಂದ ಸ್ಪರ್ಧಿಸಬಹುದಿತ್ತು. ಅನೇಕ ಅವಕಾಶಗಳೂ ಇತ್ತು. ಆದರೆ ಯಾವುದೇ ಪಕ್ಷಕ್ಕೆ ಸೇರದೆ ಬೇಸರದ ನಡುವೆಯೂ ಬಿಜೆಪಿ  ಮೇಲಿನ ಮಮತೆಯನ್ನು ಮೆರೆದಿದ್ದಾರೆ ಅಮರ್ ಕೋಟೆ. ಇದನ್ನೂ ಪಕ್ಷದ್ರೋಹವೆನ್ನುವ ನಿಮ್ಮನ್ನು ಅದೇನನ್ನಬೇಕೋ… ಇನ್ನೊಂದು ವಿಷಯ. ಯಾರೋ ಕುರುಡರು ಹೇಳಿದ್ದರಂತೆ, ಅಮರ್ ಕೋಟೆಗೆ ಮಿಥುನ್ ರೈ ಒಂದು ಲಕ್ಷ ಕೊಟ್ಟಿದ್ದಾರೆಂದು. ಎಂತಹಾ ಹಾಸ್ಯ. ಇದನ್ನು ಹೇಳುವವರು ಕುರುಡರು ಹಾಗೂ ಇದನ್ನು ಕೇಳಿ ಸುದ್ಧಿ ಹಬ್ಬಿಸುವವರು ಬುದ್ಧಿಮಾಂದ್ಯರು. ಹುಚ್ಚಾಟಿಕೆಗೆ ಅಮರ್ ಕೋಟೆಯವರನ್ನು ಬೆಂಬಲಿಸುತ್ತಿಲ್ಲ. ಬಿಜೆಪಿ ನಾಯಕರೇ ಅಮರ್ ಕೋಟೆಯವರನ್ನು ಬೆಂಬಲಿಸಿದ್ದಾರೆ. ಮಾಸ್ತಿಕಟ್ಟೆ ವಾರ್ಡಿನ ಬಿಜೆಪಿ ಕಾರ್ಯಕರ್ತರೇ ಅಮರ್ ಕೋಟೆಯವರನ್ನು ಬೆಂಬಲಿಸಿದ್ದು. ಬಿಜೆಪಿ ಸಿದ್ಧಾಂತದೊಂದಿಗೆ ಮೋದಿಯವರ ಕೆಲಸವನ್ನು ಮಾಡುವುದೇ ಅಮರ್ ಕೋಟೆ ಉದ್ಧೇಶ. ಎದುರಾಳಿಗಳ ಭಯ ನಮಗೆ ಅರ್ಥ ಆಗಿದೆ. ಸೋಲಿನ ಭೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೀಚುತ್ತಿರುವ ನಿಮಗೆ ಶುಭವಾಗಲಿ.
ಚುನಾವಣೆಗಾಗಿ ನಮ್ಮ ನಮ್ಮೊಳಗೆ ಕಹಲಗಳನ್ನು ಸೃಷ್ಟಿ ಮಾಡುವ ನಿಮ್ಮ ಚಿಂತನೆಯನ್ನು ನಮ್ಮ ಪಕ್ಷದ ಸಿದ್ಧಾಂತ ಒಪ್ಪುತ್ತದೆಯೇ ಎಂಬುವುದನ್ನು ಮೊದಲು ನೋಡಿ. ಮೂಡುಬಿದಿರೆಯಲ್ಲಿ ಪಕ್ಷದ ನಾಯಕರಲ್ಲಿ ಮೊದಲು ಒಮ್ಮತವನ್ನು ಮೂಡಿಸಿ. ಒಬ್ಬರನ್ನು ಕಂಡರೆ ಒಬ್ಬರಿಗಾಗಲ್ಲ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಸಾಧ್ಯವಿದ್ದರೆ ಜಗಳ ಬಿಟ್ಟು ಒಂದಾಗಿ ಕೆಲಸ ಮಾಡಿ. ಇಲ್ಲವಾದಲ್ಲಿ ಮುಂದೊಂದು ದಿನ ಕೇವಲ ಮಾಸ್ತಿಕಟ್ಟೆ ಮಾತ್ರವಲ್ಲ, ನಿಮ್ಮ ಬಣಜಗಳಕ್ಕೆ ಪ್ರತೀ ಕಡೆಗಳಲ್ಲೂ ಪಕ್ಷೇತರ ಎಂಬ ಕೂಗು ಕೇಳಬಹುದು ಎಚ್ಚರಿಕೆ.
ಮತ್ತೊಂದು ವಿಷಯ, ಮಾಸ್ತಿಕಟ್ಟೆ ಬಿಜೆಪಿ ಅಭ್ಯರ್ಥಿಯನ್ನು ಶಾಸಕರಾದ ಉಮನಾಥ್ ಕೋಟ್ಯಾನ್ ಘೋಷಿಸಿದ್ದು ಎಂದು ಎಲ್ಲೋ ಓದಿದ ಹಾಗೆ ಆಯ್ತು, ಇದು ನಿಜವೇ? ಶಾಸಕರಿಗೆ ಇನ್ನೂ ಈ ವಿಚಾರವಾಗಿ ಬೇಸರ ಇದೆಯಂತೆ? ಇದೆಲ್ಲಾ ಅಂತೆಕಂತೆ ಬಿಡಿ.
ಶುಭವಾಗಲಿ…

LEAVE A REPLY

Please enter your comment!
Please enter your name here