ವಾಯ್ಸ್ ಆಫ್ ಆರಾಧನಾ ಅವಾರ್ಡ್2021

0
8971
ಆರದಿರಲಿ ಬದುಕು ಆರಾಧನಾ ಸಂಸ್ಥೆ ಪ್ರಸ್ತುತಿ...

ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಪ್ರಸ್ತುತ ಪಡಿಸುವ   ವಾಯ್ಸ್ ಆಫ್ ಆರಾಧನಾ  ಅವಾರ್ಡ್2021 ಮಾರ್ಚ್‌ ೭ರಂದು ಬೆಳಗ್ಗೆ ೮.೩೦ರಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕಿ ಪದ್ಮಶ್ರೀ ನಿಡ್ಡೋಡಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ವೇದಮೂರ್ತಿ ಹರಿನಾರಾಯಣ ಅಸ್ರಣ್ಣ  ದೀಪ ಪ್ರಜ್ವಲನೆ ಗೈಯುವರು. ಜಿಲ್ಲಾ ಬಿಜೆಪಿ ಅಧ್ಯಕ್ಷ  ಸುದರ್ಶನ್ ಎಂ  ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಜೆ.ಸಿ.ಐ ಅಧ್ಯಕ್ಷ ಸ್ವರೂಪ್ ಶೇಖರ್ , ಡಾ.ಶೇಖರ್ ಅಜೆಕಾರು ,ವಿಜಯ ಕುಮಾರ್ ಜೈನ್,  ಆರ್. ರವೀಂದ್ರ ಪೈ , ವೇಣುಗೋಪಾಲ ,ಆರ್.ಜೆ ಎರಾಲ್. , ಹರೀಶ್ ಕೆ.ಆದೂರು ಭಾಗವಹಿಸುವರು. ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದ ಗಣ್ಯರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಗುತ್ತದೆ.  ಸಮಾಜಿಕ ಸೇವೆಯಲ್ಲಿ ಅಸೀಫ್‌, ಸ್ಪೂರ್ತಿ ವಿಶೇಷ ಶಾಲೆಯ ಪ್ರಕಾಶ್‌ ಶೆಟ್ಟಿಗಾರ್‌, ಮಾಧ್ಯಕ್ಷ ಕ್ಷೇತ್ರದಲ್ಲಿ ಪ್ರೇಮಾಶ್ರೀ ಕಲ್ಲಬೆಟ್ಟು  ರಂಗಭೂಮಿ ಕ್ಷೇತ್ರದ ಮಣಿ ಕೋಟೆ ಬಾಗಿಲು ,  ಸಂಗೀತ ಕ್ಷೇತ್ರದ ಸಾಧನೆಗಾಗಿ ಸೋಮಶೇಖರ ಮಯ್ಯ ಶಿರ್ತಾಡಿ , ಸಂತೋಷ್ ಕುಮಾರ್.. ಜೆ.ಸಿ.ಐ.. ಮೂಡುಬಿದಿರೆ , ದಿವಾಕರ ಪೂಜಾರಿ. ವಾಯ್ಸ್ ಆಫ್ ಆರಾಧನಾ ದ  ಕಲಾಪೋಷಕರನ್ನು ಗೌರವಿಸಲಾಗುವುದು ಎಂದವರು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here