ವಾಯುಪಡೆಗೆ 'ತೇಜಸ್' ಬಲ

0
573

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ವಾಯುಸೇನೆಗೆ ಇಂದು ಸ್ವದೇಶಿ ವಿಮಾನ ಸೇರ್ಪಡೆಯಾಗಿದೆ. ಇಂದು ಬೆಂಗಳೂರು ಹೆಚ್ ಎಎಲ್ ನಲ್ಲಿ ಅಧಿಕೃತವಾಗಿ ವಾಯುಸೇನೆಗೆ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ‘ತೇಜಸ್’ ಸೇರ್ಪಡೆಯಾಗಿದೆ.
 
 
 
‘ತೇಜಸ್’ ಸೇರ್ಪಡೆಯಿಂದ ವಾಯಸೇನೆ ಮತ್ತಷ್ಟು ಬಲ ಬಂದಂತಾಗಿದೆ. ತೇಜಸ್ ಸೇರ್ಪಡೆ ಮುನ್ನ ಹೆಚ್ ಎ ಎಲ್ ವಿಶೇಷ ಪೂಜೆ ಮತ್ತು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಗಿದೆ.
 
 
 
ಈ ವಿಮಾನ ಬೆಂಗಳೂರಿನ ಹೆಚ್ ಎಎಲ್ ನಲ್ಲಿ ನಿರ್ಮಾಣವಾಗಿದ್ದು, ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹಸ್ತಾಂತರವಾಗಿದೆ. ಭಾರತೀಯ ವಾಯುಸೇನೆಗೆ ಇಂದು 2 ವಿಮಾನ ಹಸ್ತಾಂತರವಾಗಿದೆ.
 
 
 
ಹೆಚ್ ಎಎಲ್ ನ ಜನರಲ್ ಮ್ಯಾನೇಜರ್ ಶ್ರೀಧರನ್ ಅವರು ಏರ್ ಕಮಾಂಡಿಂಗ್ ಚೀಫ್ ಏರ್ ಮಾರ್ಷಲ್ ಜಸ್ಬೀರ್ ವಾಲಿಯಾ ಅವರಿಗೆ ಏರ್ ಕ್ರಾಫ್ಟ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ ಮೆಂಟ್ ನಲ್ಲಿ 2 ತೇಜಸ್ ಲಘು ಯುದ್ಧ ವಿಮಾನಗಳನ್ನು ಹಸ್ತಾಂತರಿಸಿದ್ಧಾರೆ.

LEAVE A REPLY

Please enter your comment!
Please enter your name here