ವಾಚ್ ಪ್ರಕರಣ: ಸಿಎಂಗೆ ಕ್ಲೀನ್ ಚಿಟ್

0
236

ಬೆಂಗಳೂರು ಪ್ರತಿನಿಧಿ ವರದಿ
ದುಬಾರಿ ವಜ್ರ ಖಚಿತ ಊಬ್ಲೋ ವಾಚ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ಊಬ್ಲೋ ವಾಚ್ ಅನ್ನು ಸಿದ್ದರಾಮಯ್ಯನವರಿಗೆ ನಾನೇ ನೀಡಿರುವುದಾಗಿ ಅವರ ಸ್ನೇಹಿತ ಡಾ.ಗಿರೀಶ್‍ಚಂದ್ರ ವರ್ಮ ಎಸಿಬಿಗೆ ಹೇಳಿರುವುದರಿಂದ ಈ ಪ್ರಕರಣ ಇತ್ಯರ್ಥಗೊಂಡಿದೆ.
 
 
ಸಿಎಂ ಸಿದ್ದರಾಮಯ್ಯ ಅವರು 70 ಲಕ್ಷ ಬೆಲೆಯ ವಜ್ರ ಖಚಿತ ಹ್ಯೂಬ್ಲಾಟ್ ವಾಚ್ ಧರಿಸಿದ್ದರ ಸಂಬಂಧ ವಕೀಲ ನಟರಾಜ ಶರ್ಮ, ಆರ್ ಟಿ ಐ ಕಾರ್ಯಕರ್ತ ರಾಮಮೂರ್ತಿ ಗೌಡ ಮತ್ತು ಟಿ.ಜೆ ಅಬ್ರಹಾಂ ಪ್ರತ್ಯೇಕವಾಗಿ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ನಂತರ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. ದುಬೈ ಮೂಲದ ಸಿಎಂ ಸ್ನೇಹಿತ ಡಾ. ಗಿರೀಶ್ ಚಂದ್ರ ವರ್ಮಾ ಅವರ ಹೇಳಿಕೆ ಆಧಾರದ ಮೇಲೆ ಪ್ರಾಥಮಿಕ ತನಿಖೆಯ ನಂತರ ಪ್ರಕರಣವನ್ನು ಕ್ಲೋಸ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here