ವಾಚನೋತ್ಸವ ಪಾಕ್ಷಿಕ 2016

0
147

 
ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಮವ್ವಾರು ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕೇರಳ ಗ್ರಂಥಾ ಶಾಲಾ ಸಂಘದ ಸ್ಥಾಪಕರಾದ ಶ್ರೀ ಪಿ.ಯನ್ ಪಣಿಕ್ಕರ್ ಇವರ ಸಂಸ್ಮರಣಾ ದಿನಾಚರಣೆಯಂಗವಾಗಿ 15 ದಿನಗಳ ಪರ್ಯಂತ ನಡೆಸುವ “ವಾಚನೋತ್ಸವ ಪಾಕ್ಷಿಕ 2016” ಕಾರ್ಯಕ್ರಮವನ್ನು ಕಾರಡ್ಕ ಬ್ಲೋಕ್ ಪಂಚಾಯತು ಸದಸ್ಯ ಸುಂದರ ಮವ್ವಾರು ಇವರು ಉದ್ಘಾಟಿಸಿ ಮಾತನಾಡಿದರು.
 
 
 
ಸದ್ರಿ ಸಂಘದ ಅಧ್ಯಕ್ಷರು ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ ಸೀತಾಂಗೋಳಿ ಶಾಖೆಯ ಪ್ರಬಂಧಕ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯದ ಪ್ರಿನ್ಸಿಪಾಲ್ ಚಾತು ಕುಟ್ಟಿ ಮಾಸ್ತರ್ ಇವರು ಮಾತನಾಡುತ್ತಾ ವಾಚನಾ ಪಕ್ಷಾಚರಣೆ ಮಹತ್ವವನ್ನು ಮನೋಜ್ಞವಾಗಿ ವಿವರಿಸಿದರು.
 
 
 
ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರೂ ಕೂಡಾ ದಿನದಲೊಂದಷ್ಟು ಸಮಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿಯಮಿತವಾದ ಓದು ಜ್ಞಾನಾರ್ಜನೆಗೆ ದಾರಿಯಾಗಬಲ್ಲುದು, 65 ವರ್ಷಗಳ ಮೊದಲು ಸ್ಥಾಪಿಸಿದ ಈ ಗ್ರಂಥಾಲಯವು ಈ ಊರಿನ ಹೆಮ್ಮೆಯ ಸಂಸ್ಥೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು “ಎ ಗ್ರೇಡ್” ಲೈಬ್ರೆರಿಯಾಗಿ ಬೆಳೆಸಬೇಕಾದುದು ಓದುಗರ ಕರ್ತವ್ಯವೆಂದು ನೆನಪಿಸಿದರು.
 
 
 
ಶ್ವೇತಾ ಹಾಗೂ ಶ್ರದ್ಧಾ ಮವ್ವಾರು ಇವರು ಓದಿನ ಮಹತ್ವದ ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಗ್ರಂಥಾಲಯದ ಉಪಾಧ್ಯಕ್ಷa ಗಂಗಾಧರ ಮಾಸ್ತರ್ ಮಠದಮೂಲೆ ಇವರು ಸ್ವಾಗತಿಸಿದರು. ಕಾರ್ಯದರ್ಶಿ ಸದಾಶಿವ ಚೆಟ್ಟಿಯಾರ್ ವಂದಿಸಿದರು.

LEAVE A REPLY

Please enter your comment!
Please enter your name here