ವಸ್ತುಪ್ರದರ್ಶನ

0
297

 
ಉಜಿರೆ ಪ್ರತಿನಿಧಿ ವರದಿ
ರಾಷ್ಟ್ರೀಯ ಸೇವಾ ಯೋಜನೋತ್ಸವದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಹಮ್ಮಿಕೊಂಡ ವಸ್ತು ಪ್ರದರ್ಶನವು ತಂತ್ರಜ್ಞಾನ ಹಾಗೂ ನಗರೀಕರಣದ ವಿವಿಧ ಪ್ರಭಾವಗಳಿಗೆ ಕನ್ನಡಿ ಹಿಡಿಯಿತು. ಹಳ್ಳಿಗರ ಕ್ಷೇಮಾಭಿವೃದ್ಧಿಯ ಸಾಧ್ಯತೆಗಳನ್ನು ಕಂಡರಿಸಿತು.
 
ಎಸ್ಡಿಎಂ ಕಾಲೇಜಿನ ಸಸ್ಯಶಾಸ್ತ್ರದ ವಿಭಾಗದ ಪ್ರಯೋಗಾಲಯದಲ್ಲಿ ಐದು ದಿನಗಳ ಕಾಲ ಆಯೋಜಿತವಾಗಿದ್ದ ಈ ವಸ್ತುಪ್ರದರ್ಶನವು ವಿವಿಧ ಭಾಗಗಳಿಂದ ಬಂದಿದ್ದ ಸ್ವಯಂಸೇವಕರು ಮತ್ತು ಎನ್ಎಸ್ಎಸ್ ಅಧಿಕಾರಿಗಳ ಗಮನ ಸೆಳೆಯಿತು.
 
ವಿವಿಧ ವಿಶ್ವವಿದ್ಯಾನಿಲಯಗಳ ಎನ್.ಎಸ್.ಎಸ್. ವಿದ್ಯಾರ್ಥಿಗಳು ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು.
 
 
ಗ್ರಾಮೀಣ ಪ್ರದೇಶದ ಮಹಿಳೆಯರು, ಮಕ್ಕಳ ರಕ್ಷಣೆ, ಕಾನೂನು ವ್ಯವಸ್ಥೆ, ಮಹಿಳಾ ಸಬಲೀಕರಣ, ಸ್ವಚ್ಛ ಭಾರತ, ಆರ್ಯವೇದ, ಮನೆಮದ್ದು, ಗಿಡಮೂಲಿಕೆ, ಪಶುಸಂಗೊಪನೆ, ಪ್ರಾಚೀನ ಕಾಲದ ವಸ್ತುಗಳ ಸಂರಕ್ಷಣೆ, ಆರೋಗ್ಯವಂತ ಭಾರತ ಮತ್ತು ಯುವಜನತೆ, ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಹೊಸ ತಳಿಗಳು, ಆಧುನಿಕ ತಂತ್ರಜ್ಞಾನದ ಸದ್ಬಳಕೆ ಕುರಿತ ವೈವಿಧ್ಯಮಯ ಮಾಹಿತಿಯನ್ನು ವಸ್ತು ಪ್ರದರ್ಶನದ ಮೂಲಕ ಪ್ರಚರಪಡಿಸಲಾಯಿತು.

LEAVE A REPLY

Please enter your comment!
Please enter your name here