ನಮ್ಮ ಪ್ರತಿನಿಧಿ ವರದಿ
ಕಿಳಿಂಗಾರು ನಡುಮನೆ ಶ್ರೀ ಶಂಕರನಾರಾಯಣ ಸ್ವಾಮಿ ದೇವರ ದೇವ ಕಾರ್ಯ. ಶತರುದ್ರ, ಕಾಶೀ ಸಮಾರಾಧನೆ ಹಾಗೂ ವಸಿಷ್ಠ ಪ್ರಶಸ್ತಿ ಪೀಠದ 23ನೇ ವಾರ್ಷಿಕೋತ್ಸವವು ಜರಗಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಜ್ಯೋತಿಷಿ ಸುಬ್ರಹ್ಮಣ್ಯ ಭಟ್ ಚೇಕೋಡು ಇವರೀಗೆ ಪ್ರಶಸ್ತಿ ಪ್ರಧಾನ ಮತ್ತು ಬ್ರಹ್ಮಶ್ರೀ ವೇ|ಮೂ| ಮುರಳೀ ಕೃಷ್ಣ ಶರ್ಮ ಮಿತ್ತೂರು ಇವರಿಗೆ ಪ್ರತಿಭಾ ಪುರಸ್ಕಾರವು ಬ್ರಹ್ಮಶ್ರೀ ಜ್ಯೋತಿರತ್ನ ಬೇಳ, ಪದ್ಮನಾಭ ಶರ್ಮ ಇರಿಂಜಾಲಕ್ಕುಡ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ರಹ್ಮಶ್ರೀ ಜ್ಯೋತಿಷಿ ಚಂದ್ರಶೇಖರ ಭಟ್ ಮಡ್ವ ಅಭಿನಂದನೆ ಮಾಡಿದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಕಿಳಿಂಗಾರು, ವೇದಮೂರ್ತಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ನಡುಮನೆ, ಪವನ ಬಿ ಆಚಾರ್ಯ ಮಣಿಪಾಲ ಮತ್ತು ಪುತ್ತಿಗೆ ಅಧಿಕಾರಿ ಕೃಷ್ಣಯ್ಯ ಮಾಸ್ತರ್ ಶುಭಾಶಂಸನೆಗೈದರು. ಮುರಳೀಧರ, ನಾಗರಾಜ, ರವಿಕುಮಾರ ಮತ್ತು ಶಿವಪ್ರಸಾದ ಪ್ರಾರ್ಥನೆಗೈದರು.
ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ಟರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷ್ಣಪ್ರಕಾಶ ಬಳ್ಳಂಬೆಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು. ಪತ್ತಡ್ಕ ಗಣಪತಿ ಭಟ್ಟರು ಧನ್ಯವಾದವನ್ನಿತ್ತರು. ಕಾರ್ಯಕ್ರಮದ ನಂತರ ಆಶಿಕಾ ಚೆಂಬರ್ಪು ಇವಳಿಂದ ಭರತನಾಟ್ಯ ನಡೆಯಿತು. ವೇದಮೂರ್ತಿ ರವಿಕುಮಾರ ಕಡುಮನೆ ಹಾಗೂ ಶಿವಪ್ರಸಾದ್ ಭಟ್ ಸನ್ಮಾನಪತ್ರ ವಾಚಿಸಿದರು