ವರುಣನ ಅರ್ಭಟಕ್ಕೆ ಚೀನಾ ತತ್ತರ

0
198

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರಿ ಗುಡುಗು ಸಹಿತ ಗಾಳಿ ಮಳೆಯಿಂದ ದಕ್ಷಿಣ ಚೀನಾ ತತ್ತರಿಸಿ ಹೋಗಿದೆ. ವರುಣನ ಅರ್ಭಟಕ್ಕೆ ಪ್ರವಾಹ ಭೀತಿ ಎದುರಾಗಿದ್ದು, ಇದೀಗ ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ.
 
 
ಇನ್ನು ಮುಂದಿನ ಮೂರು ದಿನಗಳು ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ಹುವಾಯಿ ಹಾಗೂ ಯಾಂಗ್ಜೆ ನದಿ ಸಮೀಪ ಧಾವಿಸದಂತೆ ಜನತೆಗೆ ಎಚ್ಚರಿಕೆ ನೀಡಿದೆ. ಸಿಚುವಾನ್, ಹೆನಾನ್, ಹ್ಯೂಬಿ, ಜಿಯಾಂಗ್ಸು ಸೇರಿದಂತೆ ಹಲವು ಕಡೆ ಮಂಗಳವಾರ 130 ಮಿಲಿಮೀಟರ್ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
 
 
 
ಕಳೆದ ಒಂದು ವಾರದಲ್ಲಿ ಹುನಾನ್ ಪ್ರಾಂತ್ಯದಿಂದ 27,000 ಜನರು ಹಾಗೂ ಗುವಾಂಗ್ಡಾಂಗ್ ಪ್ರಾತ್ಯದಿಂದ 40,000 ಜನರನ್ನು ಸ್ಥಳಾಂತರಿಸಲಾಗಿದೆ. ಭಾನುವಾರ ಮಳೆಗೆ ಆರು ಜನ ಸಾವನ್ನಪ್ಪಿದ್ದು, ಎಂಟು ಜನ ಕಣ್ಮರೆ ಆಗಿದ್ದಾರೆ. ಹಲವಾರು ಜನರು ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

LEAVE A REPLY

Please enter your comment!
Please enter your name here