ಪ್ರಮುಖ ಸುದ್ದಿವಾರ್ತೆವಿದೇಶ

ವರುಣನ ಅರ್ಭಟಕ್ಕೆ ಉತ್ತರ ತತ್ತರ

 
ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಭಾರತದಾದ್ಯಂತ ಭಾರೀ ವರ್ಷಧಾರೆಯಾಗುತ್ತಿದೆ. ಭಾರೀ ಮಳೆಗೆ ಉತರ ಭಾರತದ ಜಿಲ್ಲೆಗಳು ತತ್ತರಿಸಿ ಹೋಗಿದೆ.
 
 
ಬಿಹಾರ ಮೇಘಾಲಯ ಉತ್ತರಾಖಂಡ್​ ಅಸ್ಸಾಂ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನ ನಿಭಾಯಿಸೋಕೆ ಎನ್ ಡಿಆರ್ ಎಫ್ ಹರಸಾಹಸ ಪಡ್ತಿದೆ.
 
 
 
ಬಿಹಾರದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 28ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಜತೆಗೆ 12 ಜಿಲ್ಲೆಗಳಲ್ಲಿನ 5ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತಾ ಸ್ಥಳಗಳಿಗೆ ರವಾನಿಸಲಾಗಿದೆ.
 
 
ಅಸ್ಸಾಂನಲ್ಲೂ ಪ್ರವಾಹದಿಂದ 29ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ. 28 ಜಿಲ್ಲೆಗಳ ಸುಮಾರು 20ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ. ಪ್ರವಾಹದ ಪರಿಸ್ಥಿತಿಯಿಂದ ರಸ್ತೆ ಹಾಗೂ ನದಿ ಪಾತ್ರದಲ್ಲಿ ಭೂ ಕೊರೆತ ಸಂಭವಿಸುತ್ತಿದೆ.
 
 
ರಾಜಸ್ಥಾನದ ಫಾಲನ ಜಿಲ್ಲೆಯ ಕಾರಿ ನದಿಯ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಶಿಮ್ಲಾದಲ್ಲೂ ಮಳೆಯ ಆರ್ಭಟ ಜೋರಾಗಿದೆ. ರಸ್ತೆ ಗುಂಡಿಗಳೆಲ್ಲ ಸಂಪೂರ್ಣ ಜಲಾವೃತವಾಗಿದೆ. ಬಿಹಾರ, ಅಸ್ಸಾಂ, ಉತ್ತರ ಭಾರತದಾದ್ಯಂತ ಮಳೆ ಇನ್ನೂ ಮುಂದುವರಿಯುವ ಸಾಧ್ಯತೆಗಳಿದ್ದು. ರಕ್ಷಣಾ ತಂಡ ಪರಿಸ್ಥಿತಿಯನ್ನ ನಿಭಾಯಿಸೋಕೆ ಟೊಂಕ ಕಟ್ಟಿ ನಿಂತಿವೆ..

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here