ವರಾಹಗಿರಿ ವೆಂಕಟ ಗಿರಿ ಮೇ3, 1969 ರಿಂದ ಜುಲೈ 1969

0
4913

 
ವಾರ್ತೆ ಜ್ಞಾನ:
ವರಾಹಗಿರಿ ವೆಂಕಟಗಿರಿ ಮೂಲತಃ ಒಬ್ಬ ಕಾರ್ಮಿಕನಾಯಕರಾಗಿ ಮೇಲೆ ಬಂದವರು. ಭಾರತದ 4ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಸ್ಥಾನವನ್ನಲಂಕರಿಸಿದರು.
 
 
ವರಾಹಗಿರಿ ವೆ೦ಕಟ ಗಿರಿಯವರು (ವಿ ವಿ ಗಿರಿ)ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. 3 ಮೇ 1969 – 20 ಜುಲೈ 1969 ಅವಧಿಯಲ್ಲಿ ತಾತ್ಕಾಲಿಕವಾಗಿ ಮತ್ತು 1969ರಿಂದ 1974 ಪೂರ್ಣಾವಧಿ ರಾಷ್ಟ್ರಪತಿಗಳಾಗಿದ್ದರು.
 
 
 
ಇವರು ಆಗಸ್ಟ್ 10 1894ರಂದು ಬರ್ಹಾಂಪುರದಲ್ಲಿ ವಿ.ವಿ. ಗಿರಿ ಜನಿಸಿದರು.  ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಜತೆ ಭಾಗವಹಿಸಿದ್ದ ಇವರು ಕಾರ್ಮಿಕರ ಒಕ್ಕೂಟ ಬಲಪಡಿಸಲು ತಮ್ಮನ್ನು ತೊಡಗಿಸಿಕೊಂಡರು. ಅವರ ನೇತ್ರತ್ವದಲ್ಲಿ ರೇಲ್ವೆ ಉದ್ಯೋಗಿಗಳು ೧೯೨೬-೨೭ರಲ್ಲಿ ಮುಷ್ಕರ ಹೂಡಿದರು. ಅವರ ಸಂಖ್ಯೆ ಆಗ ೪೦೦೦ದಷ್ಟಿತ್ತು. ಗಿರಿಯವರು ಯಶಸ್ವಿಯಾದರು. ಅಲ್ಲಿಂದಾಚೆಗೆ ಅವರು ಅಖಿಲ ಭಾರತ ರೇಲ್ವೇ ಕಾರ್ಮಿಕರ ಒಕ್ಕೂಡದ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷ,ಅಖಿಲ ಭಾರತ ಟ್ರೇಡ್, ಯೂನಿಯನ್ ಕಾಂಗ್ರೇಸ್ ಅಧ್ಯಕ್ಷ, ವಿಧಾನಸಭಾ ಸದಸ್ಯ,ಮದ್ರಾಸ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ಕೈಗಾರಿಕ ಸಚಿವ,ಶ್ರೀಲಂಕದಲ್ಲಿ ಹೈ ಕಮೀಷನರ್,೧೯೫೨ರಲ್ಲಿ ಲೋಕಸಭಾ ಸದಸ್ಯ ಹಾಗೂ ಮೈಸೂರು ರಾಜ್ಯದ ರಾಜ್ಯಪಾಲ,೧೯೬೭ರಲ್ಲಿ ಉಪರಾಷ್ಟ್ರಪತಿ,೧೯೬೯ರಲ್ಲಿ ಭಾರತದ ರಾಷ್ಟ್ರಪತಿ ಸ್ಥಾನಗಳನ್ನು ಅಲಂಕರಿಸಿದರು.
 
 
ವಿ.ವಿ. ಗಿರಿ ಸ್ನೇಹಸಂಪನ್ನರಾಗಿದ್ದರು. ಸಮಾಜ ಸೇವೆ ಅವರಿಗೆ ಹುಟ್ಟಿನಿಂದಲೇ ಬಂದಿತ್ತು. ಕಾರ್ಮಿಕ ಸಚಿವ ಆಗಿದ್ದಾಗ ಕಾರ್ಮಿಕಾಸಕ್ತಿಯ ಸಂಗತಿ ಉಲ್ಬಣಿಸಿದಾಗ ತತ್ವಬಧ್ಧರಾಗಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರಿಗೆ ಕಾರ್ಮಿಕರ ಕಲ್ಯಾಣವೇ ಮುಖ್ಯ ಗುರಿಯಾಗಿತ್ತು.ಕಾರ್ಮಿಕರ ಏಳಿಗೆಗಾಗಿ ದುಡಿದ ಅವರನ್ನು ಭಾರತ ಸರ್ಕಾರ 1974ರಲ್ಲಿ ಭಾರತ ರತ್ನ”‘ ನೀಡಿ ಗೌರವಿಸಿತು. ಕಾಶಿ,ಆಂಧ್ರ ಹಾಗೂ ಲಕ್ನೋ ವಿಶ್ವವಿದ್ಯಾನಿಲಯಗಳು ಅವರಿಗೆ ಡಿ.ಲಿಟ್ ಪ್ರಶಸ್ತಿ ನೀಡಿದ್ದವು. ಆಗ್ರಾ,ಮಾಸ್ಕೊ,ಬಲ್ಗೇರಿಯ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಡಿಗ್ರಿ ನೀಡಿ ಪುರಸ್ಕರಿಸಿದವು.ವಿ.ವಿ. ಗಿರಿಯವರು 1980ರ ಜೂನ್ 24 ರಂದು ಮದ್ರಾಸ್ ನಲ್ಲಿ ತೀರಿಕೊಂಡರು.
 
 
 
 
 
 
 
 
 
 

LEAVE A REPLY

Please enter your comment!
Please enter your name here