ವರಮಹಾಲಕ್ಷ್ಮೀ ಹಬ್ಬದ ಅಡುಗೆ

0
518

ವಾರ್ತೆ ರೆಸಿಪಿ
ಇಂದು ವರಮಹಾಲಕ್ಷ್ಮೀ ಹಬ್ಬವಾಗಿದೆ. ಇಂದು ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ.
 
ವಾಂಗೀಭಾತ್
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ 300ಗ್ರಾಂ., ವಾಂಗೀಭಾತ್ ಪುಡಿ 20 ಗ್ರಾಂ., ಕರಿಭೇವು 5 ಎಸಳು, ದಾಲ್ಚಿನ್ನಿ-5ಗ್ರಾಂ., ರಿಫೈನ್ಡ್ ಆಯಿಲ್ 50 ಗ್ರಾಂ., ಬದನೆಕಾಯಿ 250 ಗ್ರಾಂ., ಒಣಕೊಬ್ಬರಿ ತುರಿ 50 ಗ್ರಾಂ., ಗೋಡಂಬಿ 20ಗ್ರಾಂ., ಲವಂಗ 2, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಅಕ್ಕಿಯನ್ನು ನೀರಿನಲ್ಲಿ ತೊಳೆದು ಕುಕ್ಕರ್ ನಲ್ಲಿ ಬೇಯಿಸಿ. ಬದನೇಕಾಯಿಗಳನ್ನು ಸಣ್ಣಗೆ ಉದ್ದವಾಗಿ ಹೆಚ್ಚಿ ನೀರಿನ ಪಾತ್ರೆಗೆ ಹಾಕಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಿ. ಲವಂಗ, ದಾಲ್ಚಿನಿ, ಗೋಡಂಬಿ, ಕರಿಬೇವು ಹಾಕಿ ಹುರಿಯಿರಿ. ನಂತರ ಬದನೆಕಾಯಿಯನ್ನು ಹಾಕಿ ಹುರಿಯುವುದನ್ನು ಮುಂದುವರಿಸಿ. ಸ್ವಲ್ಪ ನೀರು, ಉಪ್ಪು, ವಾಂಗೀಭಾತ್ ಪುಡಿ ಹಾಕಿ ಕುದಿಸಿ. ಚೆನ್ನಾಗಿ ಬೆಂದ ಮೇಲೆ ಬಾಣಲೆಯನ್ನು ಒಲೆಯಿಂದ ಇಳಿಸಿ. ಬೆಂದ ಅನ್ನ ಹಾಕಿ ಚೆನ್ನಾಗಿ ಕಲೆಸಿ. ಈಗ ವಾಂಗೀಭಾತ್ ರೆಡಿ.
 
 
ಸಜ್ಜಪ್ಪ
ಬೇಕಾಗುವ ಪದಾರ್ಥಗಳು: ಚಿರೋಟಿ ರವೆ 1 ಬಟ್ಟಲು ತುಪ್ಪ 1 ಟಿಸ್ಪೂನ್ ಕಾಯಿತುರಿ 2 ಬಟ್ಟಲು ಬೆಲ್ಲ 1 ಬಟ್ಟಲು ಏಲಕ್ಕಿ ಪುಡಿ 1 ಟಿಸ್ಪೂನ್ ದ್ರಾಕ್ಷಿ ಮತ್ತು ಗೋಡಂಬಿ 1/4 ಬಟ್ಟಲು (ತುಪ್ಪದಲ್ಲಿ ಹುರಿದದ್ದು)
ಮಾಡುವ ವಿಧಾನ: ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ತುಪ್ಪವನ್ನು ಸುರಿದು ಕಲಸಿಟ್ಟಿಕೊಳ್ಳಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಿ. ಆ ಸಮಯದಲ್ಲಿ ಇನ್ನೊಂದೆಡೆ ಹೂರಣಕ್ಕೆ ಸಿದ್ಧತೆ ನಡೆಸಿ. ಹೂರಣವನ್ನು ಮಾಡುವ ವಿಧಾನ : ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿಯಿರಿ. ನಂತರ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ಸ್ಟೋವ್‌ನಿಂದ ಕೆಳಗಿಳಿಸಿ. ನಂತರ ಮೊದಲೇ ಕಲಸಿಟ್ಟಿದ್ದ ಹಿಟ್ಟನ್ನು ತೆಗೆದುಕೊಂಡು, ಸಣ್ಣ ಸಣ್ಣಗೆ ದುಂಡಾಕಾರದ ಉಂಡೆಗಳನ್ನು ಮಾಡಿ. ಅದರೊಳಕ್ಕೆ ಹೂರಣವನ್ನು ತುಂಬಿ. ಆಮೇಲೆ ಹಿಟ್ಟಿನ ತುದಿಯಿಂದ ಮುಚ್ಚಿ ಎಣ್ಣೆ ಕೈಯಿಂದ ಕೈಯಲ್ಲಿ ದುಂಡಾಕಾರಕ್ಕೆ ತಟ್ಟಬೇಕು. ಹೀಗೆ ಲಟ್ಟಿಸಿದ ಪೂರಿ ಆಕಾರದ ದುಂಡಗಿನ ಸಜ್ಜಪ್ಪವನ್ನು ಎಣ್ಣೆಯಲ್ಲಿ ಕರಿಯಿರಿ. ಕೆಂಪಗೆ ಕರಿದ ಬಿಸಿಬಿಸಿಯಾದ, ಮತ್ತು ಗರಿಗರಿಯಾದ ಸಜ್ಜಪ್ಪ ರೆಡಿ.
 
 
 
ದಾಳಿಂಬೆ ಹಣ್ಣಿನ ಗೊಜ್ಜು
ಬೇಕಾಗುವ ವಸ್ತುಗಳು: 1 ಕಪ್ ದಾಳಿಂಬೆ ಹಣ್ಣಿನ ಬೀಜ, 2 ಚಮಚ ಉದ್ದಿನಬೇಳೆ, 3-4 ಒಣಮೆಣಸು, 1 ಕಪ್ ತೆಂಗಿನ ತುರಿ, 3 ಚಮಚ ಎಣ್ಣೆ, 1 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಎಸಳು ಕರಿಬೇವಿನೆಲೆ, 1 ಟೊಮೆಟೊ, 1 ಚಮಚ ಹುಳಿರಸ, 1 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು.
ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ, ಉದ್ದಿನಬೇಳೆ, ಕೆಂಪುಮೆಣಸು ಹಾಕಿ ಹುರಿದು ಕೆಳಗಿಳಿಸಿ. ನಂತರ ತೆಂಗಿನತುರಿ, ಗುರಿದ ಮಸಾಲೆ ಹಾಕಿ ರುಬ್ಬಿ. ನಂತರ ಸ್ವಲ್ಪ ತೆಂಗಿನ ತುರಿ, ದಾಳಿಂಬೆ ಹಣ್ಣಿನ ಬೀಜ ಹಾಕಿ (ಪ್ರತ್ಯೇಕವಾಗಿ ರುಬ್ಬಿ) ನಂತರ ಬಾಣಲೆ ಒಲೆಯಮೇಲಿಟ್ಟು ಎಭ್ಭೆ ಹಾಕಿ. ಬೆಸಿಯಾದಾಗ ಅನುಕ್ರಮವಾಗಿ ಸಾಸಿವೆ, ಜೀರಿಗೆ, ಕರಿಬೇವು, ಟೊಮೆಟೊ ಚೂರು ಹಾಕಿ ಸ್ವಲ್ಪ ಹುರಿದು ರುಬ್ಬಿದ ತೆಂಗಿನ ಮಿಶ್ರಣ ಹಾಕಿ ಹಸಿವಾಸನೆ ಹೋಗುವ ತನಕ ಹುರಿದು, ದಾಳಿಂಬೆ ರುಬ್ಬಿದ ಮಿಶ್ರಣ ಹಾಕಿ. ಹುಳಿರಸ, ಬೆಲ್ಲ, ಉಪ್ಪು ಹಾಕಿ ಒಂದು ಕುದಿ ಕುದಿಸಿ, ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ. ಈ ಗೊಜ್ಜು ಚಪಾತಿ, ಪೂರಿ, ರೊಟ್ಟಿ ಜೊತೆ ತಿನ್ನಲು ರುಚಿ.

LEAVE A REPLY

Please enter your comment!
Please enter your name here