ವರದಿ ವಿಶ್ಲೇಷಿಸುವಂತೆ ಸೂಚನೆ

0
384

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎಂಬ ವರದಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ನೌಕಾಪಡೆ ಮುಖ್ಯಸ್ಥರಿಗೆ ಬಹಿರಂಗಗೊಂಡಿರುವ ವರದಿಯನ್ನು ವಿಶ್ಲೇಷಿಸುವಂತೆ ಆದೇಶಿಸಿದ್ದಾರೆ.
 
 
ಭಾರತೀಯ ನೌಕಾದಳದ ಸಬ್ ಮೆರಿನ್ ನ ರಹಸ್ಯ ದಾಖಲೆ ಸೋರಕೆ ಬಗ್ಗೆ ಆಸೀಸ್ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಬ್ ಮೆರಿನ್ ನ 22 ಸಾವಿರ ಪುಟಗಳ ದಾಖಲೆ ಸೋರಿಕೆಯಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಸೂಕ್ತ ತನಿಖೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆದೇಶಿಸಿದ್ದಾರೆ.
 
 
ಜಲಾಂತರ್ಗಾಮಿ ವಾಟರ್ ಸೆನ್ಸಾರ್, ನಿರ್ಮಾಣ ವ್ಯವಸ್ಥೆ, ಸಮೂಹ ವ್ಯವಸ್ಥೆ ಸೇರಿ ಹಲವು ವಿಷಯಗಳ ದಾಖಲೆಗಳು ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಆದರೆ ಘಟನೆ ಬಗ್ಗೆ ಭಾರತೀಯ ನೌಕಾದಳ ಮುಖ್ಯಸ್ಥರ ತನಿಖೆ ನಡೆಯಲಿದೆ. ಭಾರತದಲ್ಲಿ, ವಿದೇಶದಲ್ಲಿ ಸಬ್ ಮೆರಿನ್ ನ ದಾಖಲೆಗಳು ಸಂಪೂರ್ಣ ಸೋರಿಕೆಯಾಗಿರಲು ಸಾಧ್ಯವಿಲ್ಲ ಎಂದು ಪರಿಕ್ಕರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here