ವಯೋವೃದ್ದರು, ಅಶಕ್ತರಿಗೆ ಆಧಾರ್ ನೊಂದಣಿ ಆರಂಭ

0
562

 
ಉಡುಪಿ ಪ್ರತಿನಿಧಿ ವರದಿ
ಆಧಾರ್ ನೊಂದಣಿ ಮಾಡಿಸಲು ಸಾಧ್ಯವಾಗದ ಅಶಕ್ತರಾದ ವಯೋವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಇತರ ಅಶಕ್ತ ವ್ಯಕ್ತಿಗಳ ಮಾನವೀಯತೆ ನೆಲೆಯಲ್ಲಿ ಅವರ ಮನೆಗೆ ತೆರಳಿ ಆಧಾರ್ ನೊಂದಣಿ ಮಾಡಲು ಇ-ಆಡಳಿತ ಕೇಂದ್ರದಿಂದ ನೀಡಿರುವ ನಿರ್ದೇಶನದಂತೆ , ಉಡುಪಿ ನಗರದ ಕಿನ್ನಿಮುಲ್ಕಿಯ ನಿವಾಸಿಯಾಗಿರುವ ಬಿ ಕಿಶೋರ್ ಕುಮಾರ್ ರವರ ಮನವಿಯಂತೆ, ಅವರ 86 ವರ್ಷ ಪ್ರಾಯದ ದೊಡ್ಡಮ್ಮ ಹಾಗೂ 83 ವರ್ಷ ಪ್ರಾಯದ ತಾಯಿಯ ಆಧಾರ್ ನೊಂದಣಿ ಮಾಡಲು ಕೋರಿದ್ದು, ಇವರ ಮನವಿ ಸ್ವೀಕರಿಸಿದ 12 ಗಂಟೆಯೊಳಗೆ ಜಿಲ್ಲಾಡಳಿತದ ವತಿಯಿಂದ ಅವರ ಮನೆಗಳಿಗೆ ಆಪರೇಟರ್ಗಳು ಆಧಾರ್ ಕಿಟ್ ನೊಂದಿಗೆ ತೆರಳಿ ಎರಡು ಜನ ಅಶಕ್ತರಿಗೆ ಆಧಾರ್ ಕಾರ್ಡ್ ನೊಂದಣಿ ಮಾಡಿಸಲಾಗಿದೆ.
 
 
 
ಆದ್ದರಿಂದ ಉಡುಪಿ ಜಿಲ್ಲೆಯಲ್ಲಿರುವ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ನೊಂದಣಿ ಮಾಡುವಂತೆ ವಿನಂತಿಸಲಾಗಿದೆ ಹಾಗೂ ಜಿಲ್ಲೆಯಲ್ಲಿರುವ ನಾಗರಿಕರ ಪೈಕಿ 2016 ರ ಏಪ್ರಿಲ್ 30 ರೊಳಗೆ ಎಲ್ಲಾ ನಾಗರಿಕರ ಆಧಾರ್ ಕಾರ್ಡ್ ನೊಂದಾಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
 
 
 
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತವಿರುವ 12,22,454 ಜನಸಂಖ್ಯೆಗಳ ಪೈಕಿ ಈವರೆಗೆ 11,46,715 ನಾಗರಿಕರ ಆಧಾರ್ ಕಾರ್ಡ್ ನೊಂದಣಿ ಮಾಡಲಾಗಿದೆ ಉಡುಪಿ ಜಿಲ್ಲೆಯ ನಾಗರಿಕರ ಆಧಾರ್ ಕಾರ್ಡ್ ನೊಂದಣೆಯಲ್ಲಿ ರಾಜ್ಯದಲ್ಲಿ 3ನೇ ಸ್ಥಾನದಲ್ಲಿರುತ್ತದೆ. ಹಾಗೂ ದ್ವಿತೀಯ ಹಂತದಲ್ಲಿ ನಡೆಸಲಾದ ಆಧಾರ್ ಕಾರ್ಡ್ ನೊಂದಣೆಯಲ್ಲಿ 93% ಆಗಿದ್ದು, ಉಡುಪಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ವಿಶಾಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here