ನವದೆಹಲಿ ಪ್ರತಿನಿಧಿ ವರದಿ
ದೆಹಲಿಯಲ್ಲಿ ಹಿರಿಯ ವಕೀಲರ ಜತೆ ಎಂ ಬಿ ಪಾಟೀಲ್ ಚರ್ಚೆ ನಡೆಸಲಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ವಕೀಲರ ಜತೆ ಮಾತುಕತೆ ನಡೆಸಲಿದ್ದಾರೆ. ಕಾವೇರಿ ಮೇಲ್ಮನವಿ ವಿಚಾರಣೆಯ ವೇಳೆ ನಿಲುವಿನ ಬಗ್ಗೆ ಚರ್ಚಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ದೆಹಲಿಗೆ ಸಚಿವರಾದ ಎಂ ಬಿ ಪಾಟೀಲ್, ಜಯಚಂದ್ರ ಭೇಟಿ ನೀಡಿದ್ದಾರೆ. ಇಂದು ಸಂಜೆ ಸಚಿವರು ಸುಪ್ರೀಳಕೋರ್ಟ್ ನ ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಅವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕಾವೆರಿ, ಮಹದಾಯಿ, ಕೃಷ್ಣಾ ನದಿ ವಿವಾದಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಮಾತುಕತೆಯಲ್ಲಿ ಸಚಿವ ಎಂ ಬಿ ಪಾಟೀಲ್ ಅವರು ಕರ್ನಾಟಕದ ನಿಲುವಿನ ಬಗ್ಗೆ ಚರ್ಚಿಸಿದ್ದಾರೆ. ಕಾವೇರಿ, ಮಹದಾಯಿ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಫೆ.7ರಂದು ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.
ಮಹದಾಯಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸುವ ವಿಚಾರದ ಬಗ್ಗೆಯೀ ಚರ್ಚಿಸಲಿದ್ದು, 7 ಟಿಎಂಸಿ ನೀರು ಕೋರಿ ಅರ್ಜಿ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ನ್ಯಾಯಾಧಿಕರಣದಲ್ಲೇ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ.