ಲೋಕೋಪಯೋಗಿ ಇಲಾಖೆಯನ್ನು ಎಬ್ಬಿಸಿದ ಪಂ.ಸದಸ್ಯ

0
224

 
ಶ್ಯಾಮ್ ಪ್ರಸಾದ್, ಬದಿಯಡ್ಕ
ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಚೆರ್ಕಳ-ಕಲ್ಲಡ್ಕ ರಸ್ತೆಯ ಬದಿಯಡ್ಕದಿಂದ ಕಾಡಮನೆವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಕಾಡು ಬೆಳೆದಿದ್ದು ಮಳೆನೀರು ಸಮರ್ಪಕವಾಗಿ ಹೋಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿ ಕೆಲವು ವರ್ಷಗಳೇ ಸಂದವು. ನೀರು ಹೋಗಲಿರುವ ಚರಂಡಿಯ ಕಾಮಗಾರಿಯನ್ನು ನಡೆಸದಿರುವುದೇ ಪೊದೆಗಳು ಬೃಹದಾಕಾರವಾಗಿ ಬೆಳೆಯಲು ಕಾರಣವಾಯಿತು. ಇದರಿಂದಾಗಿ ಮಳೆನೀರು ಸಂಚಾರಕ್ಕೆ ರಸ್ತೆಯನ್ನು ಉಪಯೋಗಿಸಬೇಕಾದ ಅನಿವಾರ್ಯತೆ ಬಂದೊದಗಿತು. ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾಗುತ್ತಿತ್ತು. ಇಳಿಜಾರು ಪ್ರದೇಶವಾದುದರಿಂದ ಮಳೆಗಾಲ ಆರಂಭವಾದರೆ ಗುಡ್ಡದ ಬದಿಯಿಂದ ಬಂದಂತಹ ನೀರೆಲ್ಲವೂ ರಸ್ತೆಯಲ್ಲೇ ಬರುತ್ತಿತ್ತು. ಮಳೆ ಬಿಟ್ಟರೂ ರಸ್ತೆಯಲ್ಲಿ ನೀರು ಸಂಚರಿಸುತ್ತಿತ್ತು.
 
 
ಮಾದರಿಯಾದ ಪಂ.ಸದಸ್ಯ :
ಬದಿಯಡ್ಕ ಗ್ರಾಮ ಪಂಚಾಯತು 6ನೇ ವಾರ್ಡ್ ಜನಪ್ರತಿನಿಧಿ ವಿಶ್ವನಾಥ ಪ್ರಭು ಅವರು ಜನಪ್ರತಿನಿಧಿಯಾಗಿ ಚುನಾಯಿತನಾಗುವ ಮೊದಲೇ ಈ ಗಂಭೀರ ಸಮಸ್ಯೆಯನ್ನು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಿದ್ದರು. ಆದರೆ ಈ ಸಮಸ್ಯೆಯ ಪರಿಹಾರಕ್ಕೆ ಇಲಾಖೆಯು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜನಪ್ರತಿನಿಧಿಯಾದ ಮೇಲೆ ಇಲಾಖೆಯವರನ್ನು ಇನ್ನೊಮ್ಮೆ ಸಂಪರ್ಕಿಸಿದರು.
 
 
ಕೊನೆಗೂ ಸಂಬಂಧಪಟ್ಟ ಇಲಾಖೆಯವರು ಇವರನ್ನು ಕರೆಸಿ ಅವರಿಂದಲೇ ಗುತ್ತಿಗೆದಾರರನ್ನು ಸಂಪರ್ಕಿಸಿ ಕೆಲಸಕಾರ್ಯಗಳನ್ನು ಮಾಡುವಂತೆ ಸೂಚಿಸಿದರು. ಅದರಂತೆ ರಸ್ತೆಯ ಬದಿಯ ಕಾಡನ್ನು ಕಡಿದು ತೆಗೆಯುವ ಕೆಲಸ ಆರಂಭಗೊಂಡಿತು. ನೀರಿನ ಪ್ರವಾಹಕ್ಕೆ ಸರಿಯಾದ ಚರಂಡಿ ವ್ಯವಸ್ಥೆಯನ್ನೂ ಮಾಡಲು ಕ್ರಮಕೈಗೊಳ್ಳಲಾಯಿತು.
ಓರ್ವ ಪಂಚಾಯತು ಸದಸ್ಯನಾಗಿ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿ ರಿಪೇರಿ ಕಾರ್ಯಕ್ಕೆ ಮುತುವರ್ಜಿಯಿಂದ ಕೆಲಸ ಮಾಡಿರುವುದು ಊರವರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here