ಲೋಕಾರ್ಪಣಾ ಸಮಾರಂಭ

0
387

ನಮ್ಮ ಪ್ರತಿನಿಧಿ ವರದಿ
ಜ್ಞಾನ ಹಾಗೂ ಭಕ್ತಿಯ ಕೊರತೆಯಿಂದ ಗೋಹತ್ಯೆ ನಡೆಯುತ್ತಿದ್ದು, ಜನರಿಗೆ ಗೋವಿನ ಕುರಿತಾದ ಅರಿವು ನೀಡುವುದರ ಮೂಲಕ ಹಾಗೂ ಗೋವಿನ ಕುರಿತಾಗಿ ಭಕ್ತಿಯನ್ನು ತುಂಬುವ ಮುಖಾಂತರ ಗೋಹತ್ಯೆಯನ್ನು ತಡೆಯಬೇಕಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ, ಮಾಧಿಯಮ್ ಗೋಶಾಲೆಯ ಸುನೀಲಕುಮಾರ್ ಶರ್ಮ ಅವರಿಗೆ ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿ ಮಾತನಾಡಿದ ಅವರು ರಾಜಸ್ಥಾನ ಮರಳುಗಾಡಾದರೂ ಅಲ್ಲಿ ಹಾಲಿನ ಹೊಳೆ ಹರಿಯುತ್ತದೆ. ರಾಜಸ್ಥಾನ ಮೂಲದ ಸುನಿಲ್ ಕುಮಾರ್ ಅವರು, ಉದ್ಯಮಿಯಾಗಿದ್ದರೂ ಬೆಂಗಳೂರಿನಲ್ಲಿ ಗೋಶಾಲೆಯನ್ನು ನಡೆಸುತ್ತಿರುವುದು ಅಭಿನಂದನೀಯ. ಹಣವಿರುವವರು ಆಸ್ತಿಪಾಸ್ತಿಗಾಗಿ, ವ್ಯಸನಗಳಿಗಾಗಿ ಹಣವನ್ನು ಬಳಸುತ್ತಾರೆ, ಆದರೆ ಗೋಸಂರಕ್ಷಣೆಯಂತಹ ಉತ್ತಮ ಕಾರ್ಯಗಳಿಗೂ ಸದ್ವಿನಿಯೋಗ ಮಾಡಬಹುದು ಎಂಬುದಕ್ಕೆ ಇವರು ಉದಾಹರಣೆ ಎಂದರು.
 
 
 
ಸುರಭಿಸಾಹಿತ್ಯ ವಿಭಾಗವು ಹೊರತಂದಿರುವ ’ತುಪ್ಪ ಬಂದಿದ್ದೆಲ್ಲಿಂದ’ ಎಂಬ ಮಕ್ಕಳ ಸಾಹಿತ್ಯವನ್ನು ಲೋಕಾರ್ಪಣಗೊಳಿಸಿದ ಶ್ರೀಗಳು, ಇಂದು ತುಪ್ಪ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳೂ ಕಲಬೆರಕೆಯಾಗುತ್ತಿದ್ದು, ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತಿದೆ. ಅಂತೆಯೇ ಇಂದಿನ ಮಕ್ಕಳಿಗೆ ಪ್ಯಾಕೇಟ್ ಹಾಲು, ಪ್ಯಾಕೇಟ್ ತುಪ್ಪ ಮಾತ್ರ ಗೊತ್ತು, ಗೋವು-ಹಾಲು-ತುಪ್ಪ ಇತಾಯದಿಗಳ ಬಗ್ಗೆ ತಿಳಿಯಲು ಅವಕಾಶವೇ ಇಲ್ಲದಂತಾಗಿದೆ. ಇಂತಹ ಪುಸ್ತಕದ ಮೂಲಕ ಅರಿವನ್ನು ಪಡೆದುಕೊಳ್ಳುವಂತಾಗಲಿ ಎಂದು ಆಶಿಸಿದರು.
 
 
 
ಇದೇ ಸಂಧರ್ಭದಲ್ಲಿ ಶಾಂಕರ ಸಿದ್ಧಾಂತದಲ್ಲಿ ಅನುಪಮ ಸೇವೆಸಲ್ಲಿಸುತ್ತಿರುವ ಹಿರಿಯ ವಿದ್ವಾಂಸರಾದ ಶ್ರೀ ಶಿವರಾಮ ಅಗ್ನಿಹೋತ್ರಿಗಳನ್ನು ಶ್ರೀಗಳು ಆಶೀರ್ವದಿಸಿದರು. ಉಲ್ಲೇಖ ವಿಭಾಗದ ಸಹಕಾರದೊಂದಿಗೆ ಕರ್ನಾಟಕ ಸರ್ಕಾರದ ಪತ್ರಾಗಾರ ಇಲಾಖೆ ಪ್ರಕಟಿಸಿದ ’ರಾಮಚಂದ್ರಾಪುರಮಠದ ಚಾರಿತ್ರಿಕ ದಾಖಲೆಗಳು -2′ ಎಂ ಆರ್ ದತ್ತಾತ್ರೇಯ ಅವರು ರಚಿಸಿ, ಶ್ರೀವಿಶ್ವಕೋಶವಿಭಾಗ ಹೊರತಂದಿರುವ ಕೃತಿ ’ಶ್ರೀಹವ್ಯಕ ಗುರುಪೀಠಂ’ ಎಂಬ ಸಂಸ್ಕೃತ ಕಾವ್ಯ, ಸುರಭಿಸಾಹಿತ್ಯ ವಿಭಾಗವು ಹೊರತಂದಿರುವ ’ತುಪ್ಪ ಬಂದಿದ್ದೆಲ್ಲಿಂದ’ ಎಂಬ ಮಕ್ಕಳ ಸಾಹಿತ್ಯ ಹಾಗೂ ಶ್ರೀಮಠದ ಯೋಜನೆಗಳಾದ ಮುಷ್ಟಿಭಿಕ್ಷಾ ಹಾಗೂ ಬಿಂದುಸಿಂಧು ಕುರಿತಾದ ಪ್ರಸ್ತುತಿ ಲೋಕಾರ್ಪಣೆಗೊಂಡಿತು. ಆನಂತರ ಕಲಾರಾಮ ವೇದಿಕೆಯಲ್ಲಿ ವಿದ್ವಾನ್ ಅನಂತ ಭಾಗ್ವತ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here