ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ

0
510

ವರದಿ: ಲೇಖಾ
ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಅಧಿವೇಶನದ ಕಲಾಪ ಸೋಮವಾರ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ಮಧ್ಯಪ್ರದೇಶದ ಸಂಸದ ದಲ್ಪತ್ ಸಿಂಗ್ ಪರಸ್ತೆ ಮತ್ತು ಆರು ಜನ ಮಾಜಿ ಸಂಸದರ ಗೌರವಾರ್ಥ ಸಂತಾಪ ಸೂಚಕ ನಿರ್ಣಯ ಅಂಗೀಕರಿಸಲಾಯಿತು.
 
 
ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಶೋಕ ಸಂದೇಶವನ್ನು ಓದಿ ಹೇಳಿದರು. ಸದನದಲ್ಲಿ ಮೃತರಿಗೆ ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಬಳಿಕ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
 
 
ಸಂತಾಪ ಸೂಚಕ ನಿರ್ಣಯಕ್ಕೆ ಮುನ್ನ ಸಂಪ್ರದಾಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದರು.
 
 
ರಾಜ್ಯ ಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಸಭಾಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಪ್ರಮಾಣವಚನ ಬೋಧಿಸುವುದರೊಂದಿಗೆ ಮುಂಗಾರು ಅಧಿವೇಶನ ಕಲಾಪಗಳು ಆರಂಭಗೊಂಡವು.
 
 
ಕಲಾಪ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಗುಜರಾತಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಿಎಸ್​ಪಿ ಸದಸ್ಯರು ಗದ್ದಲ ನಡೆಸಿದ ಪರಿಣಾಮವಾಗಿ ಕಲಾಪಗಳನ್ನು ಸಂಕ್ಷಿಪ್ತವಾಗಿ ಮುಂದೂಡಲಾಯಿತು.

LEAVE A REPLY

Please enter your comment!
Please enter your name here