ಲೋಕಸಭೆಯಲ್ಲಿ ಪ್ರಧಾನಿ ಮಾತು

0
546

ನವದೆಹಲಿ ಪ್ರತಿನಿಧಿ ವರದಿ
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ನಡೆದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ಪ್ರಧಾನಿ ಮಾತು:

  • ನೋಟ್ ಬ್ಯಾನ್ ಕುರಿತು ನಾವು ಸದಾ ಸಿದ್ಧವಿದ್ದೆವು. ಆದರೆ ವಿಪಕ್ಷಗಳು ಅದಕ್ಕೆ ಅವಕಾಶ ನೀಡಲಿಲ್ಲ.ನೋಟ್ ಬ್ಯಾನ್ ವಿಚಾರದಲ್ಲಿ ವಿಪಕ್ಷಗಳು ಮೈಲೇಜ್ ಪಡೆಯಲು ಯತ್ನಿಸುತ್ತಿದೆ.ಭ್ರಷ್ಟಾಚಾರ ಆರಂಭವಾಗುವುದೇ ನಗದು ವ್ಯವಹಾರದಿಂದ. ಹೀಗಾಗಿ ನಾವು ನಗದು ವ್ಯವಹಾರ ಕಡಿತ ಮಾಡುತ್ತಿದ್ದೇವೆ. ಬೇನಾಮಿ ವ್ಯವಹಾರವೇ ಕಪ್ಪುಹಣ ಕ್ರೋಡೀಕರಣದ ಮೂಲವಾಗಿದೆ. ರಾಜೀವ್ ಗಾಂಧಿ ಅವರು ಬೇನಾಮಿ ಆಸ್ತಿ ಕುರಿತು ಕಾನೂನು ತಂದಿದ್ದರು. ಆದೆ ಇದುವರೆಗೂ ಆ ಕಾನೂನು ಯಾಕೆ ಜಾರಿಗೆ ತಂದಿಲ್ಲ? ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
  •  ದೇಶದಲ್ಲಿ ಭ್ರಷ್ಟಾಚಾರದ ಆರಂಭ ನೆರವಿನಿಂದ ಆಗುತ್ತದೆ. 1988ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದರು. ಆಗ ನಿಮ್ಮ ಪಕ್ಷ ಪೂರ್ಣವಾದ ಬಹುಮತ ಪಡೆದಿತ್ತು. ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಕಾನೂನು ತಂದಿದ್ದರು. ಆದರೆ ಇದುವರೆಗೆ ನೀವು ಅದನ್ನು ಏಕೆ ಜಾರಿ ಮಾಡಲಿಲ್ಲ. ಎಲ್ಲಾ ರಾಜ್ಯಗಳಲ್ಲೂ ನೀವೇ ಅಧಿಕಾರದಲ್ಲಿದ್ದರೂ ಜಾರಿ ಇಲ್ಲ.
  • ರಾಹುಲ್ ಗಾಂಧಿ ಭೂಕಂಪ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್ ನೀಡಿದ್ದಾರೆ. ರಾಹುಲ್ ಹೇಳಿದಂತೆ ಎಲ್ಲಿಯೂ ಭೂಕಂಪ ಆಗಿಲ್ಲ.
  • ಮೋದಿ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ, ಕ್ಷಮೆಯಾಚನೆಗೆ ಪಟ್ಟು ಹಿಡಿದ್ದಾರೆ.
  • ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಚುನಾವಣೆಯ ಚಿಂತೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಬಗ್ಗೆ ಚಿಂತಿಸಿಲ್ಲ. ಆದರೆ ನಾವು ಬಡವರ ಪರವಾಗಿ ಸದಾ ಹೋರಾಡುತ್ತೇವೆ.ಈ ಹೋರಾಟವನ್ನು ನಾವು ಸದಾ ಮುಂದುವರಿಸುತ್ತೇವೆ.
  • ಬೇನಾಮಿ ಆಸ್ತಿ ಹೊಂದಿರುವವರೇ ಎಚ್ಚರದಿಂದಿರಬೇಕು. ಒಂದೂಂದು ಪೈಸೆಯನ್ನೂ ಬಡವರಿಗೆ ಮರಳಿಸಬೇಕು. ಬಡವರ ಪೈಸೆ ಅವರಿಗೆ ತಲುಪುವವರೆಗೂ ಮಿರಮಿಸಲ್ಲ. ಜನ ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುತ್ತಿದ್ದರು. ಇನ್ನು ಹಾಗೆ ಯಾರೂ ಹೇಳಲು ಅವಕಾಶ ನೀಡುವುದಿಲ್ಲ. ಇಲ್ಲವಾದ್ರೆ ಅವರ ಆಸ್ತಿ ಜಪ್ತಿ ಮಾಡಲು ಕಾನೂನು ಜಾರಿ ಮಾಡಲಾಗುತ್ತದೆ.
  • ಸ್ವಾತಂತ್ರ್ಯ ಒಂದು ಕುಟುಂಬದಿಂದ ಮಾತ್ರ ಬಂದಿಲ್ಲ. ಇದಕ್ಕಾಗಿ ಸಹಸ್ರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಪ್ರಧಾನಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಿರುಗೇಡು ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಸ್ವಚ್ಛತೆಯ ಬಗ್ಗೆ ಹೇಳುತ್ತಿದ್ದರು. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿರಲಿಲ್ಲ. ನಾವೀಗ ಸ್ವಚ್ಛತೆಯ ಬಗ್ಗೆ ಮಾಡನಾಡಿದರೆ ಟೀಕೆ ಮಾಡುತ್ತೀರಿ ಎಂದು ಪ್ರಧಾನಿ ಹೇಳಿದ್ದಾರೆ.
  • ನಾವು ನಾಯಿಗಳ ರೀತಿ ಪರಂಪರೆಯಲ್ಲಿ ಬೆಳೆದು ಬಂದವರಲ್ಲ. ಕಾಂಗ್ರೆಸ್ ಪಕ್ಷ ಪ್ರಜಾತಂತ್ರವನ್ನು ಉಳಿಸುವ ಕೃಪೆ ಮಾಡಿದೆ.ಪ್ರಜಾಪ್ರಭುತ್ವವನ್ನು ಒಂದು ಪರಿವಾರದ ಹೆಸರಿಗೆ ಮಾಡಿದೆ ಎಂದು ಪ್ರಧಾನಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. 1975ರಲ್ಲಿ ಇಡೀ ದೇಶ ಕಾರಾಗೃಹವಾಗ ಪರಿವರ್ತನೆಯಾಗಿತ್ತು. ಪ್ರಜಾಪ್ರಭುತ್ವವನ್ನು ಒಂದು ಕುಟುಂಬಕ್ಕಾಗಿ ಅಡವಿಡಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
  • ಮನ್ರೆಗಾ ಯೋಜನೆ ನಿಯಮ ಯಾಕೆ 1035 ಸಲ ಬದಲಾಗಿತ್ತು. ಯುಪಿಎ ಅವಧಿಯಲ್ಲಿ 10.83 ಲಕ್ಷ ಮನೆಗಳ ನಿರ್ಮಾಣವಾಗಿದೆ. ನಮ್ಮ ಸರ್ಕಾರದಲ್ಲಿ 22.27 ಲಕ್ಷ ಮನೆಗಳ ನಿರ್ಮಾಣವಾಗಿದೆ. ನಮ್ಮ ಸರ್ಕಾರ 21 ಕೋಟಿ ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಿದೆ. ಕಳೆದ ಎರಡು ವರ್ಷದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳವಾಗಿದೆ. ನಮ್ಮ ಸರ್ಕಾರಗಳ ಯೋಜನೆಗಳಿಂದ ರಾಜ್ಯಗಳ ಖಜಾನೆ ಭರ್ತಿಯಾಗಿವೆ.
  • 17 ಇಲಾಖೆಯ 84 ಯೋಜನೆಗಳನ್ನು ಆಧಾರ್ ಕಾರ್ಡ್ ಜೊತೆಗೆ ಸಂಪರ್ಕಿಸಿದ್ದೇವೆ. 1.56 ಲಕ್ಷ ಕೋಟಿ ಜನರ ಅಕೌಂಟ್ ಗಳಿಗೆ ನೆರವಾಗಿ ವರ್ಗಾವಣೆಯಾಗುತ್ತಿದೆ.

LEAVE A REPLY

Please enter your comment!
Please enter your name here