ದೇಶಪ್ರಮುಖ ಸುದ್ದಿವಾರ್ತೆ

ಲೋಕಸಭೆಯಲ್ಲಿ ಅಂಗನವಾಡಿ ಗದ್ದಲ

ರಾಷ್ಟ್ರೀಯ ಪ್ರತಿನಿಧಿ ವರದಿ
ಲೋಕಸಭೆಯಲ್ಲಿ ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯರ ವಿಚಾರ ಪ್ರಸ್ತಾಪವಾಗಿದೆ. ಇಂದಿನ ಕಲಾಪದಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತೆಯರ ಬಗ್ಗೆ ಪ್ರಸ್ತಾಪಿಸಿದ್ದಾರೆ.
 
 
 
68 ಸಾವಿರ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಕೋಡುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ. ಈ ಮೊದಲು ಕೇಂದ್ರಸರ್ಕಾರ ಶೇ.90ರಷ್ಟು ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೇತನ ನೀಡುತ್ತಿತ್ತು. ಈಗ ಕೇಂದ್ರದ ಪಾಲನ್ನ ಶೇ.60ಕ್ಕೆ ಇಳಿಸಲಾಗಿದೆ. ಈ ಮೊದಲು ನೀಡುತ್ತಿದ್ದ 90:10 ಅನುದಾನದಲ್ಲಿಯೇ ಅನುದಾನ ನೀಡಿ ಎಂದು ಖರ್ಗೆ ಹೇಳಿದ್ದಾರೆ.
 
 
 
ಮಕ್ಕಳನ್ನ ನೋಡಿಕೊಳ್ಳುವ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಜನಗಣತಿ, ಚುನಾವಣೆ ಕೆಲಸಗಳನ್ನೂ ಮಾಡುತ್ತಾರೆ. ಅವರಿಗೆ ವೇತನ ಹೆಚ್ಚಿಸಲು ಕೆಂದ್ರ ಮುಂದಾಗಬೇಕು. ಎಲ್ಲ ರಾಜ್ಯಗಳಲ್ಲೂ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
 
 
 
ವಿಪಕ್ಷ ನಾಯಕರ ಪ್ರಶ್ನೆಗೆ ಅನಂತ್ ಕುಮಾರ್ ಉತ್ತರಿಸಿದ್ದಾರೆ. ಹೀಗಾಗಿ ಕಲಾಪದಲ್ಲಿ ಉಭಯ ನಾಯಕರ ನಡುವೆ ಕೆಲ ಕಾಲ ಗದ್ದಲದ ವಾತಾವರಣ ಸೃಷ್ಠಿಯಾಗಿತ್ತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here