ಲಿಕ್ವಿಡ್ ಆಕ್ಸಿಜನ್ ಸೋರಿಕೆ

0
129

ರಾಷ್ಟ್ರೀಯ ಪ್ರತಿನಿಧಿ ವರದಿ
ಗನ್ನವರಂ ಏರ್ ಪೋರ್ಟ್ ಬಳಿ ಲಿಕ್ವಿಡ್ ಆಕ್ಸಿಜನ್ ಲೀಕ್ ಆಗಿದೆ. ಲಾರಿ ಮತ್ತು ಆಕ್ಸಿಜನ್ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ್ದ ಕಾರಣ ಟ್ಯಾಂಕರ್ ನಲ್ಲಿದ್ದ ಲಿಕ್ವಿಡ್ ಆಕ್ಸಿಜನ್ ಸೋರಿಕೆಯಾಗಿದೆ.
 
 
 
ಅಂಧ್ರಪ್ರದೇಶದ ವಿಜಯವಾಡದಲ್ಲಿರುವ ಗನ್ನವರಂ ವಿಮಾನನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಅಪಘಾತ ಸಂಭವಿಸಿದೆ. ಲಿಕ್ವಿಡ್ ಆಕ್ಸಿಜನ್ ಸೋರಿಕೆಯಾಗಿ ಮಂಜು ಕವಿದ ವಾತಾವರಣ ಸೃಷ್ಠಿಯಾಗಿದೆ.
 
 
 
ಮಂಜು ಕವಿದ ವಾತಾವರಣ ಸೃಷ್ಠಿಯಾದ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಆಕ್ಸಿಜನ್ ಸಂಪೂರ್ಣ ಸೋರಿಕೆಯಾಗೋವರೆಗೂ ಏನೂ ಮಾಡಲಾಗಲ್ಲ, ಪರಿಸ್ಥಿತಿ ಹೀಗೆ ಮುಂದುವರಿಯುತ್ತದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here