ಲಾರಿಗಳು ಪಲ್ಟಿ: ಟ್ರಾಫಿಕ್ ಜಾಮ್

0
546

ಬೆಂಗಳೂರು ಪ್ರತಿನಿಧಿ ವರದಿ
ಓವರ್ ಟೇಕ್ ಮಾಡುವ ಭರದಲ್ಲಿ ಎರಡು ಲಾರಿಗಳು ಪಲ್ಟಿಯಾದ ಘಟನೆ ನಗರದ ಸುಮನಹಳ್ಳಿ ರಿಂಗ್ ರಸ್ತೆಯ ಮಧ್ಯಭಾಗದಲ್ಲಿ ಸಂಭವಿಸಿದೆ. ಚಾಲಕರ ನಿಯಂತ್ರಣ ತಪ್ಪಿ ಎರಡು ಲಾರಿಗಳು ಕೂಡ ಪಲ್ಟಿಯಾಗಿದೆ.
 
 
 
ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆ ಮಧ್ಯೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ನಿಂದ ಚಾಲಕರು ಪರದಾಡುತ್ತಿದ್ದಾರೆ.
ಪೀಣ್ಯ ಕಡೆಯಿಂದ ಸುಮನಹಳ್ಳಿ ಕಡೆಗೆ ಬರುತ್ತಿದ್ದ ಲಾರಿಗಳು ಪಲ್ಟಿಯಾಗಿದೆ.

LEAVE A REPLY

Please enter your comment!
Please enter your name here