ಲಾಕ್ ಡೌನ್ ನಡುವೆ ಟಿಪ್ಪರ್ ಓಡಾಟ ಬಲು ಜೋರು!

0
1387


ಮೂಡುಬಿದಿರೆ: ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಘೋಷಿಸಿದ ಲಾಕ್ ಡೌನ್ ಮಾದರಿಯ ಕಫ್ರ್ಯೂಗೆ ಗುರುವಾರ ಮೂಡುಬಿದಿರೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೆಳಗ್ಗೆ 11ರ ತನಕವೂ ಮೂಡುಬಿದಿರೆಯಲ್ಲಿ ಜನತೆ ಅವಶ್ಯ ವಸ್ತು ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಹನ್ನೊಂದು ಕಳೆಯುತ್ತಿದ್ದಂತೆಯೇ ಎಲ್ಲಾ ಅಂಗಡಿಗಳು ಮುಚ್ಚಿದವು. ಮಧ್ಯಾಹ್ನದ ನಂತರದಲ್ಲಿ ಕೇವಲ ಮೆಡಿಕಲ್ ಶಾಪ್ ಹಾಗೂ ಆಸ್ಪತ್ರೆಗಳು, ಬ್ಯಾಂಕ್‍ಗಳ ವ್ಯವಹಾರ ನಡೆಸುತ್ತಿದ್ದುದು ಕಂಡು ಬಂತು. ವಿರಳ ಜನಸಂಚಾರ ಪಟ್ಟಣದಲ್ಲಿತ್ತು.
ಟಿಪ್ಪರ್ ಹಾವಳಿ: ಮೂಡುಬಿದಿರೆಯಿಂದ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಮೂಡುಬಿದಿರೆ ಪಟ್ಟಣ, ಇತ್ತ ಮೂಡುಬಿದಿರೆ ಮಂಗಳೂರು ಹಾದಿಗಳಲ್ಲೂ ಭಾರೀ ಗಾತ್ರದ ಟಿಪ್ಪರ್‍ಗಳು ನಿರಂತರ ಅಬ್ಬರಿಸುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂತು.
ಎಸೆನ್ಶಿಯಲ್ ದುರುಪಯೋಗ: ಅವಶ್ಯ ವಸ್ತುಗಳ ಸಾಗಾಟಕ್ಕೆ ಸರಕಾರದಿಂದ ಅನುಮತಿ ನೀಡಲಾಗಿತ್ತು. ಆದರೆ ಈ ವ್ಯವಸ್ಥೆಯನ್ನು ಕೆಲವೊಬ್ಬರು ದುರುಪಯೋಗ ಪಡಿಸಿ ತಮ್ಮ ವ್ಯವಹಾರ ಕುದುರಿಸಿಕೊಳ್ಳುವ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ತಮ್ಮ ಸ್ವಂತ ವಾಹನಗಳಿಗೆ ಎಸೆನ್ಶಿಯಲ್ ಸರ್ವೀಸ್ ಸ್ಟಿಕ್ಕರ್ ಬಳಸಿ ವ್ಯವಹಾರಕ್ಕಾಗಿ ಸಂಚರಿಸುತ್ತಿದ್ದಾರೆ ಎಂಬ ಆರೊಪಗಳು ಬಂದಿವೆ.
ತಪಾಸಣೆ: ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಕೊರೊನಾ ತಪಾಸಣಾ ಕಾರ್ಯ ಆರಂಭಗೊಂಡಿದೆ. ರೋಗ ಲಕ್ಷಣ ಇರುವವರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ತಜ್ಞ ವೈದ್ಯರಿಂದ ಸಲಹೆ, ಆರೋಗ್ಯ ಮಾಹಿತಿ, ಔಷಧ ವ್ಯವಸ್ಥೆಗಳು ಮಾಡಲಾಗಿವೆ.
ವಾಹನ ಸಂಚಾರ: ಲಾಕ್ ಡೌನ್ ಇದ್ದರೂ ಖಾಸಗೀ ವಾಹನ ಓಡಾಟ ಜೋರಾಗಿತ್ತು. ದ್ವಿಚಕ್ರ ವಾಹನ, ಖಾಸಗೀ ಕಾರು ಇನ್ನಿತರ ವಾಹನಗಳ ಓಡಾಟ ನಡೆಯುತ್ತಿತ್ತು. ಕೆಲವೊಬ್ಬರು ಮಾಸ್ಕ್ ಧರಿಸದೆ ಪೇಟೆಯಲ್ಲಿ ತಿರುಗಾಡುತ್ತಿದ್ದರು.

LEAVE A REPLY

Please enter your comment!
Please enter your name here