“ಲಾಕ್‌ ಡೌನ್‌ ಲಹರಿಗೆ ಉತ್ತಮ ಪ್ರತಿಕ್ರಿಯೆ”

0
786

ಲಾಕ್‍ಡೌನ್ ಸಮಯದಲ್ಲಿ ಅನೇಕ ಪ್ರತಿಭೆಗಳು ಹೊರಬರುತ್ತಿವೆ ಎಂದರೆ ತಪ್ಪಾಗಲಾರದು. ಇಗಾಗಲೇ ಆಳ್ವಾಸ್ ಕಾಲೇಜಿನ ಭರತನಾಟ್ಯ ವಿದ್ಯಾರ್ಥಿಗಳು ನೃತ್ಯಂಟೈನ್ ಮೂಲಕ ರಂಜಿಸಿದರೆ, ಧೀಂಕಿಟ ಯಕ್ಷಗಾನ ತಂಡದ ವಿದ್ಯಾರ್ಥಿಗಳು ಯಕ್ಷಂಟೈನ ಮೂಲಕ ಜನರ ಮನಸೆಳೆದಿದ್ದಾರೆ. ಇದೀಗ ಆಳ್ವಾಸ್ ಕಾಲೇಜಿನ ಸಂಗೀತ ವಿದ್ಯಾರ್ಥಿಗಳು ಲಾಕ್‍ಡೌನ್ ಲಹರಿ ಮೂಲಕ ಗಾನಪ್ರಿಯರನ್ನು ರಂಜಿಸಲು ಮುಂದಾಗಿದ್ದಾರೆ. ಲಾಕ್‍ಡೌನ್ ಲಹರಿ ಇಗಾಗಲೆ ನಾಲ್ಕು ಸಾವಿರ ವೀಕ್ಷಣೆಯನ್ನು ಕಂಡಿದೆ. ಇದರ ಕುರಿತು ಲಾಕ್‍ಡೌನ್ ಲಹರಿಯ ರೂವಾರಿ ಮಯೂರ್ ಅಂಬೆಕಲ್ಲು ಅವರ ಜತೆ ನಡೆಸಿದ ಸಂದರ್ಶನ ಇಲ್ಲಿದೆ.

 1. ಲಾಕ್‍ಡೌನ್ ಲಹರಿ ನೃತ್ಯಂಟೈನ್ ಮತ್ತು ಯಕ್ಷಂಟೈನ್‍ನಿಂದ ಸ್ಪೂರ್ತಿ ಪಡೆದದ್ದ?
  ಹೌದು. ಮೊದಲು ಈ ಯೋಚನೆ ಬಂದದ್ದು ನಮ್ಮ ತಂಡದ ಸದಸ್ಯೆ ವರ್ಷರವರಿಗೆ. ನಮ್ಮ ಕಾಲೇಜಿನ ಸಾಂಸ್ಕೃತಿಕ ತಂಡವದರ ನೃತ್ಯಂಟೈನ್ ಮತ್ತು ಯಕ್ಷಂಟೈನ್ ನೋಡಿದ ನಂತರ ನಾವು ಯಾಕೆ ಮಾಡಬಾರದು ಎನ್ನುವ ಆಲೋಚನೆ ಮೂಡಿತು. ಆ ಯೋಚನೆಯಲ್ಲಿ ಮೂಡಿಬಂದದ್ದು ಈ ಲಾಕ್‍ಡೌನ್ ಲಹರಿ.
 2. ಈ ತರಹದ ವಿಡಿಯೋಗಳು ಈಗ ಟ್ರೇಂಡಿಗ್‍ನಲ್ಲಿ ಇದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
  ಟ್ರೇಂಡಿಂಗ್ ಆಗಿರೊದು ನಿಜ. ಲಾಕ್‍ಡೌನ್‍ನಲ್ಲಿ ಸಮಯ ಕಳೆಯಲು ಇದು ಉತ್ತಮ ವೇದಿಕೆ. ಇದರಿಂದ ಹೊಸದೇನೋ ಕಲಿತಂತೆ ಆಗುತ್ತದೆ ಅಲ್ಲದೆ ಸಮಯವನ್ನು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿದಂತಾಗುತ್ತದೆ.
 3. ಈ ವಿಡಿಯೋ ಮಾಡುವ ಹಿಂದಿನ ಉದ್ದೇಶ ಏನು?
  ಒಂದು ಲಾಕ್‍ಡೌನ್ ಟೈಮ್ ಸುಮ್ಮನೆ ವ್ಯರ್ಥ ಆಗುವ ಬದಲು ಒಳ್ಳೆ ಕೆಲಸಕ್ಕಾಗಿ ಬಳಕೆ ಆಗಿಲಿ ಎಂದು. ಜತೆಯಲ್ಲಿ ನಮ್ಮ ಸಂಗೀತದ ಕೌಶಲ್ಯ ಹೆಚ್ಚುತ್ತದೆ ಎಂಬ ದೃಷ್ಟಿಯಿಂದ. ಇನ್ನೊಂದು ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಒಮ್ಮೆ ಒಗ್ಗೂಡಿದ ಹಾಗೇ ಆಗುತ್ತದೆ ಎನ್ನುವ ಕಾರಣಕ್ಕೆ ಈ ವಿಡಿಯೋ ಮಾಡಲು ಮುಂದಾದೆವು.
 4. ನೃತ್ಯಂಟೈನ್ ಮತ್ತು ಯಕ್ಷಂಟೈನ್‍ನಿಂದ ಲಾಕ್‍ಡೌನ್ ಲಹರಿ ಹೇಗೆ ವಿಭಿನ್ನವಾಗಿದೆ?
  ನೃತ್ಯಂಟೈನ್ ಮತ್ತು ಯಕ್ಷಂಟೈನ್‍ನಲ್ಲಿ ಒಂದು ಪದ್ಯಕ್ಕೆ ನೃತ್ಯ ಮಾಡುವುದರಿಂದ ಅವರಿಗೆ ವಿಡಿಯೋ ಎಡಿಟಿಂಗ್ ಮಾತ್ರ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹಾಗಂತ ಅದೂ ಸುಲಭದ ವಿಷಯವಲ್ಲ. ನಮ್ಮದು ಮ್ಯೂಸಿಕ್ ಓರಿಯೆಂಟಡ್ ಆಗಿರೊದ್ದರಿಂದ ಕೊರ್ಡಿನೇಷನ್ ಸ್ವಲ್ಪ ಕಷ್ಟವಿತ್ತು. ಎಲ್ಲಾ ರೀತಿಯ ವಾಯಿಸ್‍ಗಳನ್ನು ಹೊಂದಿಸಬೇಕಾಗಿತ್ತು. ಹೆಚ್ಚು ವಿಭಿನ್ನ ಏನು ಇಲ್ಲ, ಅವರಂತೆ ಬೇರೆ ಬೇರೆ ಊರುಗಳಲ್ಲಿ ಕೂತು ಮಾಡಿರುವಂತದ್ದು. ವಾಯಿಸ್‍ಗಳ ಕೂಡುವಿಕೆಯ ಕುರಿತು ಹೆಚ್ಚಿನ ಗಮನ ಕೊಡಲಾಗಿತ್ತು.
 5. ಲಾಕ್‍ಡೌನ್ ಲಹರಿ ಸ್ವಲ್ಪ ವಿಭಿನ್ನವಾದರಿಂದ ಈ ವಿಡಿಯೋ ಚಿತ್ರಿಸುವಾಗ ಯಾವ ರೀತಿಯಾದ ಕಷ್ಟಗಳನ್ನು ಎದುರಿಸಬೇಕಾಯಿತು?
  ಈ ವಿಡಿಯೋ ಮಾಡುವುದು ತುಂಬಾ ಚಾಲೆಂಜಿಂಗ್ ಟಾಸ್ಕ್ ಆಗಿತ್ತು. ಎಲ್ಲರೂ ಒಂದೇ ಸ್ಟುಡಿಯೋ ಕೂತು ಮಾಡುವುದು ತುಂಬಾ ಸುಲಭದ ವಿಚಾರ. ಆದರೆ ಇಲ್ಲಿ ಎಲ್ಲರಲ್ಲೂ ಸ್ಟುಡಿಯೋ ಸೆಟಪ್ ಇರುವುದಿಲ್ಲ. ಇರುವ ಮೊಬೈಲ್ ಫೋನ್‍ನಲ್ಲಿ ರೆರ್ಕಾಡ್ ಮಾಡಬೇಕು. ಹಾಗಾಗಿ ತುಂಬಾ ಡಿಸ್ಟಂರ್ಬೆಸ್ಸ್ ಇರುತ್ತಿತ್ತು ಮತ್ತೆ ಶೃತಿ ಲಯ ತಾಳ ಹೊಂದಿಸೋದು ಚಾಲೆಂಜಿಂಗ್ ಆಗಿ ಇತ್ತು. ಅದು ಸರಿ ಬರಲು ತುಂಬಾ ಪ್ರಯತ್ನ ಮಾಡಿದ್ದೇವೆ. ಈ ವಿಚಾರಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ.
 6. ಬೇರೆ ವಿಡಿಯೋ ಮಾಡುವ ಅಲೋಚನೆ ಇದೆಯಾ?
  ಆಲೋಚನೆ ಇದೆ, ಇನ್ನು ಎರಡು ಮೂರು ವಿಡಿಯೋ ಮಾಡುವ ಯೋಜನೆ ಇದೆ. ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಮಾಡುತ್ತೇವೆ.
 7. ಇದರಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಸಂಗೀತವನ್ನೆ ಮುಂದುವರಿಸಿದ್ದಾರಾ?
  ಇವರೆಲ್ಲಾ ಆಳ್ವಾಸ್‍ನ ಹಳೆ ವಿದ್ಯಾರ್ಥಿಗಳು, ಕೆಲವರು ಸಂಗೀತವನ್ನು ಮುಂದುವರಿಸಿದ್ದಾರೆ. ಇನ್ನು ಕೆಲವರು ಬೇರೆ ಕಡೆ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ.
 8. ಪ್ರವೀಣ್ ಡಿ ರಾವ್ ಅವರ ಸಂಗೀತ ರಚನೆ ಮಾಡಿದ್ದಾರೆ. ಅವರ ಸಂಪರ್ಕ ಹೇಗೆ ಸಾಧ್ಯವಾಯಿತು.
  ಪ್ರವೀಣ್ ಸಾರ್ ನಾನು ಸಂಗೀತದ ವಿದ್ಯಾರ್ಥಿಯಾಗಿದ್ದಾಗ ಕಾರ್ಯಗಾರಕ್ಕೆ ಬರುತ್ತಿದ್ದರು. ಆ ದಿನಗಳಲ್ಲಿ ಅವರೇ ಈ ಪದ್ಯವನ್ನು ಹೇಳಿಕೊಟಿದ್ದರು. ನಂತರ ಈ ವಿಡಿಯೋ ಮಾಡುವಾಗ ಅವರನ್ನ ಸಂಪರ್ಕಿಸಿದ್ದೆವು. ಅವರು ಟ್ರೈಲರ್ ನೋಡಿ ಸಂತೋಷ ಪಟ್ಟಿದ್ದರು. ಅಲ್ಲದೇ ಈ ವಿಡಿಯೋದಲ್ಲಿ ಹಾಡಿರುವವರೆಲ್ಲರೂ ಆ ಕಾರ್ಯಗಾರಕ್ಕೆ ಅಟೆಂಡ್ ಆದವರೇ ಅಗಿದ್ದರಿಂದ ಎಲ್ಲರಿಗೂ ಹಾಡು ಗೊತ್ತಿತ್ತು.
 9. ವಿಡಿಯೋ ನೋಡಿದಾಗ ಸ್ಟುಡಿಯೊದಲ್ಲಿ ಕೂತು ರೆರ್ಕಾಡಿಂಗ್ ಮಾಡಿದ ಹಾಗೆ ಅನಿಸುತ್ತೆ. ಹಾಗೇ ಮೂಡಿ ಬರಲು ಅದು ಹೇಗೆ ಸಾಧ್ಯವಾಯಿತು?
  ಆ ವಿಷಯದಲ್ಲಿ ನಮಗೆ ತುಂಬಾ ಕಷ್ಟ ಇತ್ತು. ಯಾಕೆಂದರೆ ಎಲ್ಲರೂ ಮನೆಯಲ್ಲಿ ರೆರ್ಕಾಡಿಂಗ್ ಮಾಡಿದ್ದರಿಂದ ಸುತ್ತಮುತ್ತಲಿನ ಡಿಸ್ರ್ಟಬೆಂಸ್ಸ್ ಇತ್ತು. ಒಂದೇ ಶೂಟಿಗೆ ಸರಿಯಾಗಿ ಬರುತ್ತಿರಲಿಲ್ಲ ಹಾಗಾಗಿ ಮತ್ತೊಮ್ಮೆ ಶೂಟ್ ಮಾಡಿ ಕಳುಹಿಸಲು ಹೇಳುತ್ತಿದ್ದೆ.
  ತುಂಬಾ ಎಡಿಟಿಂಗ್ ಮಾಡಿದ ನಂತರ ಈ ಔಟ್‍ಪುಟ್ ಬಂತು.
 10. ವಿಡಿಯೋ ರಿಲೀಸ್ ಆದ ಮೇಲೇ ರೆಸ್ಪಾಂಸ್ ಹೇಗಿದೆ?
  ರೆಸ್ಪಾಂಸ್ ಚೆನ್ನಾಗಿದೆ. ಎಲ್ಲಾರೂ ಹೇಳ್ತಾ ಇದ್ದಾರೆ ಮನೆಯಲ್ಲಿ ಮಾಡಿದ್ದು ಅಂತ ಗೊತ್ತಾಗುತ್ತಿಲ್ಲ. ಸ್ಟುಡಿಯೊದಲ್ಲೆ ಮಾಡಿದ ಹಾಗೆ ಅನಿಸುತ್ತೆ. ವಿಡಿಯೋ ಎಡಿಟಿಂಗ್ ಎಲ್ಲಾ ಆದಷ್ಟು ಪ್ರೋಫೆಶನಲ್ಲೆ ಆಗಿ ಮೂಡಿಬರಲು ಟ್ರೈ ಮಾಡಿದ್ದೀರಾ ಅನ್ನುತ್ತಿದ್ದಾರೆ.
 11. ಎಷ್ಟು ದಿನದಿಂದ ಶ್ರಮ ಇದು?
  ಎರಡು ವಾರಗಳ ಕಾಲ ಕೆಲಸ ಮಾಡಿದ್ದೇವೆ. ಸಾಂಗ್ ರೆರ್ಕಾಡಿಂಗ್ ಮತ್ತು ಎಡಿಟಿಂಗ್ ಕೆಲಸಗಳನ್ನೆಲ್ಲ ಮಾಡಲು ಸುಮಾರು 15 ದಿನಗಳು ಬೇಕಾಯಿತು.
 12. ಈ ವಿಡಿಯೋದ ಜರ್ನಿ ಹೇಗನಿಸಿತು?
  ನಮಗೆ ಈ ಲಾಕ್‍ಡೌನ್ ಟೈಮ್ ತುಂಬಾ ಒಳ್ಳೆಯ ಅನುಭವಗಳನ್ನ ನೀಡಿತು. ಹೊಸ ಆಲೋಚನೆಯಿಂದ ಒಳ್ಳೆ ಕೆಲಸ ಮಾಡಲು ಸಾದ್ಯವಾಯಿತು. ಕಾಲೇಜಿನಲ್ಲಿ ಕಲಿತ ದಿಗಳನ್ನು ನೆನಪಿಸುವಂತೆ ಮಾಡಿತು ಈ ವಿಡಿಯೋ. ಇದೊಂತರ ಒಳ್ಳೆ ಅನುಭವಾತ್ಮಕ ಅನುಭವ ಅಂತಾನೇ ಹೇಳಬಹುದು.

ಕೀರ್ತನಾ ಭಟ್, ಕೇಳ

LEAVE A REPLY

Please enter your comment!
Please enter your name here