ಲಾಂಛನ ಲೋಕಾರ್ಪಣೆ

0
209

ನಮ್ಮ ಪ್ರತಿನಿಧಿ ವರದಿ
ಇದರ ಆಶ್ರಯದಲ್ಲಿ ಆಯೋಜಿಸಿರುವ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನದ ಅಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರ ಗುರುವಾರ ಗಂಜೀಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಿತು.
 
ಪರಮಪೂಜ್ಯ ಕೇಮಾರು ಸಾಧನಾಶ್ರಮದ ಶ್ರೀಶ್ರೀಶ್ರೀ ಈಶವಿಠಲ ದಾಸ ಸ್ವಾಮೀಜಿ ಶಿಬಿರ ಉದ್ಘಾಟಿಸಿ ಅತ್ಯಂತ ನಿರೀಕ್ಷೆಯ ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟಿವ್ ರೀಸರ್ಚ್ ಫೌಂಡೇಷನ್ ರಿ.ಗಂಜೀಮಠ ಇದರ ಲಾಂಛನ ಬಿಡುಗಡೆಗೊಳಿಸಿ ಶುಭಹಾರೈಸಿದರು.
 
ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಆಯುರ್ ಸ್ಪರ್ಶ ಸಂಸ್ಥೆ ಉತ್ತಮ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಈ ಸಾಧನೆ ಹೀಗೆ ಮುಂದುವರಿಯಲಿ ಎಂದವರು ಹಾರೈಸಿದರು. ಪ್ರಸನ್ನ ಆಯುರ್ವೇದ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಶ್ರೀಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಶಂಕರ್ ಬಿ. ಅಧ್ಯಕ್ಷತೆ ವಹಿಸಿದರು. ಫೌಂಡೇಷನ್ ನ ಸ್ಥಾಪಕ ಸದಸ್ಯೆ ಸೌಜನ್ಯ ಪ್ರಾರ್ಥಿಸಿದರು. ಟ್ರಸ್ಟ್ ನ ಗೌರವ ಮಾರ್ಗದರ್ಶಕರಾದ ನಾರಾಯಣ ಭಟ್ ವಂದಿಸಿದರು. ಟ್ರಸ್ಟ್ ನ ಸದಸ್ಯ ಹರೀಶ್ ಕೆ.ಆದೂರು ಕಾರ್ಯಕ್ರಮ ನಿರೂಪಿಸಿದರು.
 
ayur sparsha_logo lounch1
ಲಾಂಛನದ ಹಿನ್ನಲೆ…. 
ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟಿವ್ ರೀಸರ್ಚ್ ಫೌಂಡೇಷನ್ ರಿ.ಗಂಜೀಮಠ ಇದರ ಲಾಂಛನವನ್ನು ಪತ್ರಕರ್ತ, ಕಲಾವಿದ ಹರೀಶ್ ಕೆ.ಆದೂರು ವಿನ್ಯಾಸಗೊಳಿಸಿದ್ದಾರೆ. ಸಂಸ್ಥೆಯ ಹೆಸರಿನ ಮೊದಲ ಅಕ್ಷರಗಳನ್ನು ಬಳಸಿ, ಸರಳ, ಆಕರ್ಷಕ ವರ್ಣ ವಿನ್ಯಾಸದೊಂದಿಗೆ ಲಾಂಛನ ರಚಿಸಲಾಗಿದೆ.ಲಾಂಛನದ ಮೇಲ್ಭಾಗದಲ್ಲಿ ನೀಲವರ್ಣದ ಬಿಂಧುವಿದೆ. ಅಂತಾರಾಷ್ಟ್ರೀಯ ಮಧುಮೇಹ ದಿನವನ್ನು ನೀಲ ವೃತ್ತದ ಮೂಲಕ ಗುರುತಿಸಲಾಗುತ್ತಿದೆ.ಅದನ್ನು ಸಂಕೇತಿಸುವ ಬಿಂಧು ಇದಾಗಿದೆ. ಅತ್ಯಂತ ಸರಳವಾಗಿರುವ ಈ ಲಾಂಛನ ಸುಲಭದಲ್ಲಿ ನೆನಪಿಡುವುದಲ್ಲದೆ ಬ್ರಾಂಡ್ ಆಗುವುದರಲ್ಲಿ ಸಂದೇಹವೇ ಇಲ್ಲ.

LEAVE A REPLY

Please enter your comment!
Please enter your name here