ಲಘು ಭೂಕಂಪನ

0
403

ರಾಷ್ಟ್ರೀಯ ಪ್ರತಿನಿಧಿ ವರದಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದೆ. ನವದೆಹಲಿಯ ಎನ್ ಸಿಆರ್ ನಲ್ಲಿ ಭೂಮಿ ಕಂಪಿಸಿದೆ. ಇಂದು ಬೆಳಗಿ ಜಾವ 4.80 ಸುಮಾರಿಗೆ ಕೆಲವು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.
 
 
ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಹರಿಯಾಣ- ರಾಜಸ್ತಾನದ ಗಡಿಭಾಗದ ಬಾವಲ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿದೆ. ದೆಹಲಿಯ ವಿವಿಧ ಪ್ರದೇಶಗಳು, ಗಾಜಿಯಾಬಾದ್, ಗುರುಗ್ರಾಮದಲ್ಲಿ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿ ಜನ ಹಾಸಿಗೆಯಿಂದಲೇ ಹೊರಗೆ ಓಡಿ ಬಂದಿದ್ದಾರೆ.
 
 
ಈ ಘಟನೆಯಿಂದ ಜನರು ಭಯಭೀತರಾಗಿದ್ದು, ಭೂಕಂಪನ್ನಕ್ಕೆ ಸಂಬಂಧಿಸಿದಂತೆ ಯಾವುದೇ ಸಾವು ನೋವಿನ ಬಗ್ಗೆ ತಿಳಿದು ಬಂದಿಲ್ಲ. ಇನ್ನು ಈ ಭೂಕಂಪವು 10 ಕಿಲೋ ಆಳದಲ್ಲಿ ಸಂಭವಿಸಿದೆ ಎಂದು ಅಮೇರಿಕಾದ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

LEAVE A REPLY

Please enter your comment!
Please enter your name here