ಲಕ್ಷದೀಪೋತ್ಸವದ ಸಂಭ್ರಮ

0
365

ಮೂಡಬಿದಿರೆ: ಮೂಡಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಮೂಡಬಿದಿರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮಂಗಳವಾರ ಲಕ್ಷ ದೀಪೋತ್ಸವ ವಿಶೇಷ ಕಾರ್ಯಕ್ರಮ ನಡೆಯಿತು. ಸಾವಿರ ಕಂಬದ ಬಸದಿಯೆಂದೇ ಖ್ಯಾತಿ ಪಡೆದ ಮೂಡಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಆಸ್ತಿಕ ಭಾವುಕ ಭಕ್ತರ ಸಮಾಗಮದೊಂದಿಗೆ ಲಕ್ಷ ದೀಪೋತ್ಸವ ಸಂಪನ್ನಗೊಂಡಿತು. ಐತಿಹಾಸಿಕ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಶ್ರಾವಕ ವರ್ಗ ತದೇಕಚಿತ್ತದಿಂದ ವೀಕ್ಷಿಸಿ ಪುನೀತರಾದರು. ಮೂಡಬಿದಿರೆಯ ನಾಗರೀಕರು, ಜೈನ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಯಕ್ಷಗಾನ ಗಾನ ವೈಭವ ನಡೆಯಿತು

LEAVE A REPLY

Please enter your comment!
Please enter your name here