ಲಂಕಾ ಸೈನಿಕರಿಂದ ಭಾರತೀಯ ಮೀನುಗಾರನ ಹತ್ಯೆ

0
385

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ದಾಳಿ ನಡೆಸಿದ್ದಾರೆ. ಏಕಾಏಕಿ ಗುಂಡಿನ ದಾಳಿ ನಡೆದ ಪರಿಣಾಮ ಓರ್ವ ಮೀನುಗಾರನ ಸಾವನ್ನಪ್ಪಿದ್ದಾರೆ.
 
 
 
ತಮಿಳುನಾಡಿನ ರಾಮೇಶ್ವರಂ ಮೂಲದ 22 ವರ್ಷದ ಬ್ರಿಡ್ಗೋ ಎಂಬ ಮೀನುಗಾರನ ಮೇಲೆ ಲಂಕಾ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮೀನುಗಾರನ ಕುತ್ತಿಗೆಗೆ ಗುಂಡು ತಗುಲಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಮೀನುಗಾರ ಸರವಣನ್ ಎಂಬಾತನ ಕಾಲಿಗೂ ಗುಂಡೇಟು ತಗುಲಿದೆ.
 
 
ಲಂಕಾದ ದಾಳಿಗೆ ರಾಮೇಶ್ವರಂ ಉದ್ವಿಗ್ನಗೊಂಡಿದ್ದು, ಲಂಕಾ ಸೈನಿಕರ ಕೃತ್ಯಕ್ಕೆ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here