ರೌಡಿ ರಫೀಕ್ ಹತ್ಯೆ

0
235

ಕಾಸರಗೋಡು ಪ್ರತಿನಿಧಿ ವರದಿ
ಕೇರಳದ ಗಡಿಭಾಗ ಕಾಸರಗೋಡಿನ ನೊಟೋರಿಯಸ್ ರೌಡಿ ಶೀಟರ್ ರಫೀಕ್ ನನ್ನು ರಸ್ತೆ ಮಧ್ಯೆಕೊಚ್ಚಿ ಕೊಲೆಮಾಡಲಾಗಿದೆ. ರಫೀಕ್ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿಹೊಡೆಸಿ ರಫೀಕ್ ನನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ಸಂದರ್ಭ ರಫೀಕ್ ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದ. ಈ ಸಂದರ್ಭದಲ್ಲಿ ಆತನ ಮೇಲೆ ಫೈರಿಂಗ್ ಮಾಡಲಾಯಿತು. ನಂತರ ಮಚ್ಚಿನಿಂದ ಕೊಚ್ಚಿ ಕೊಲೆ ಗೈಯಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆಟ್ರೋಲ್ ಬಂಕ್ ಬಳಿ ಈ ಕೃತ್ಯ ನಡೆದಿದೆ. ಈತ ಉಪ್ಪಳ ನಿವಾಸಿಯಾಗಿದ್ದ.

LEAVE A REPLY

Please enter your comment!
Please enter your name here