ರೌಡಿಶೀಟರ್ ಗೆ ರಕ್ಷಣೆಗೆ ಶಾಸಕ!

0
180

ನಮ್ಮ ಪ್ರತಿನಿಧಿ ವರದಿ
ರೌಡಿಶೀಟರ್ ಕಿರುಕುಳದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವಕನ ಆತ್ಮಹತ್ಯೆಗೆ ಕಾರಣವಾದ ರೌಡಿಶೀಟರ್ ರಕ್ಷಿಸಲು ಆನೇಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಣ್ಣ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಸಕ ಶಿವಣ್ಣ, ಸಂಸದ ಡಿಕೆ ಸುರೇಶ್ ಸಹಚರ ರೌಡಿ ಶ್ರೀನಿವಾಸ್ ಅಲಿಯಾಸ್ ಸಂಭಯ್ಯ ವಿರುದ್ಧ ಪ್ರಕರಣ ದಾಖಲಿಸದಂತೆ ಧಮ್ಕಿ ಹಾಕಿದ್ದಾರೆ. ಶಾಸಕ ಅತ್ತಿಬೆಲೆ ಪಿಎಸ್ ಐಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಶಾಸಕ ಶಿವಣ್ಣ ವಿರುದ್ಧ ಧಮ್ಕಿ ಹಾಕಿದ್ದ ಆರೋಪ ದಾಖಲಾಗಿದೆ. ಶಾಸಕ ಧಮ್ಕಿ ಹಾಕಿದ್ದಾರೆನ್ನಲಾದ ಆಡಿಯೋ ಕ್ಲಪ್ ಕೂಡ ಲಭ್ಯವಾಗಿದೆ. ಪಿಎಸ್ ಐ ಶ್ರೀನಿವಾಸ್-ಶಿವಣ್ಣ ಸಂಭಾಷಣೆಯ ಆಡಿಯೋ ಕ್ಲಿಪ್ ಮಾಧ್ಯಮಗಳಿಗೆ ಲಭ್ಯವಾಗಿದೆ.
 
 
ಅವರು ನಮ್ಮ ಹುಡುಗರು ಬಿಟ್ಟುಬಿಡು ಎಂದು ಶಾಸಕರು. ರೌಡಿ ಪರ ಬ್ಯಾಟಿಂಗ್ ಮಾಡಿ ಎಸ್ ಐ ಶ್ರೀನಿವಾಸ್ ಗೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಶಾಸಕರ ಮಾತಿ ಕೇಳದೇ ಕೇಸ್ ದಾಖಲಾಗದ ಹಿನ್ನೆಲೆಯಲ್ಲಿ ಪಿಎಸ್ ಐ ಶ್ರೀನಿವಾಸ್ ಅವರನ್ನು ಶಾಸಕರು ತಮ್ಮ ಅಧಿಕಾರ ಬಳಸಿ ಎತ್ತಂಗಡಿ ಮಾಡಿಸಿರುವ ಆರೋಪ ಕೂಡ ಇದೆ.
 
 
ಮೃತ ಯುವಕನಿಗೆ ರೌಡಿಶೀಟರ್ ತನ್ನ ಸಂಬಂಧಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂಸೆ ನೀಡಿದ್ದಾನೆ. ರೌಡಿಶೀಟರ್ ನಿಂದ ಯುವಕನಿಗೆ ನಿರಂತರ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಹಿಂಸೆ ತಾಳಲಾರದೇ ಮನನೊಂದ ಯುವ ಪ್ರೇಮಿ ಫ್ಯಾನ್ ಗೆ ನೇಣುಬಿಗಿದುಕೊಂಡಿದ್ದಾನೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮಂಚೇನಹಳ್ಳಿ ಗ್ರಾಮದ ನಿವಾಸಿ ರಂಜಿತ್ ಕುಮಾರ್(27) ಆತ್ಮಹತ್ಯೆ ಮಾಡಿಕೊಂಡ ಯುವಪ್ರೇಮಿಯಾಗಿದ್ದಾನೆ.
 
 
ಶ್ರೀನಿವಾಸ್ ಅಲಿಯಾಸ್ ಸಂಭಯ್ಯ ಸರ್ಜಾಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ರೌಡಿ ಯುವಕನಿಗೆ ಚಿತ್ರಹಿಂಸೆ ನೀಡಿ ಚೆನ್ನಾಗಿ ಧಳಿಸಿದ್ದ. ಮೃತ ಯುವಕ ರಂಜಿತ್ ಅಕ್ಟೋಬರ್ 15ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ಮೃತ ರಂಜಿತ್ ಸಂಭಯ್ಯನ ಅಕ್ಕನ ಮಗಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ರೌಡಿ ಚಿತ್ರಹಿಂಸೆಯಿಂದ ಬೇಸತ್ತು ಯುವಕ ರಂಜಿತ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

LEAVE A REPLY

Please enter your comment!
Please enter your name here