ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ.
ಬೆಂಗಳೂರು ಪೂರ್ವ ವಲಯದ ಪೂರ್ವ ವಿಭಾಗ, ಆಗ್ನೇಯ, ಈಶಾನ್ಯ ವಿಭಾಗದ ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ. ಅಪರಾಧ ಹಿನ್ನೆಲೆ ಇರುವ 120 ರೌಡಿಗಳ ವಿಚಾರಣೆ ನಡೆದಿದೆ. 12 ಇನ್ಸ್ ಪೆಕ್ಟರ್, 150 ಸಿಬ್ಬಂದಿಗಳು ವಿಚಾರಣೆ ನಡೆಯಲಿದೆ.
ಇತ್ತೀಚಿನ ಚಟುವಟಿಕೆ, ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ರೌಡಿಗಳ ಬಳಿಯಿದ್ದ ಹಲವು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.