ರೌಡಿಗಳ ಪರೇಡ್

0
185

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಅಶೋಕನಗರ ಠಾಣೆ ಬಳಿ ರೌಡಿಗಳ ಪರೇಡ್ ನಡೆಸಲಾಗಿದೆ. ಸೆಂಟ್ರಲ್ ವಲಯದ ಪೊಲೀಸರು ರೌಡಿಗಳ ಪರೇಡ್ ನಡೆಸಿದ್ದಾರೆ.
 
 
 
ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಗಿದೆ. ಸನ್ನಡತೆ ರೂಢಿಸಿಕೊಳ್ಳುವಂತೆ ರೌಡಿಶೀಟರ್ ಗಳಿಗೆ ಸಲಹೆ ನೀಡಲಾಗಿದೆ. ರೌಡಿ ಚಟುಚಟಿಕೆ ಬಿಟ್ಟು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಿ. ಒಳ್ಳೆಯ ನಡತೆ ಕಂಡುಬಂದವರ ಹೆಸರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕುತ್ತೇವೆ ಎಂದು ಭರವಸೆ ನೀಡಲಾಗಿದೆ.
 
 
 
ರೌಡಿ ಚಟುವಟಿಕೆ ಮುಂದುವರಿಸಿದರೆ ಗೂಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 100ಕ್ಕೂ ಹೆಚ್ಚು ರೌಡಿಗಳ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ರೌಡಿಗಳ ವಿಳಾಸ, ಬ್ಯಾಂಕ್ ಬ್ಯಾಲೆನ್ಸ್, ಕೆಲಸದ ಮಾಹಿತಿ ಪಡೆಯಲಾಗಿದೆ. ಸೆಂಟ್ರಲ್ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿ ರೌಡಿಗಳ ಮಾಹಿತಿ ಪಡೆಯಲಾಗಿದೆ.

LEAVE A REPLY

Please enter your comment!
Please enter your name here