ರೋಷನ್ ಬೇಗ ಕೈವಾಡ!

0
361

ಬೆಂಗಳೂರು ಪ್ರತಿನಿಧಿ ವರದಿ
ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಸಚಿವ ರೋಶನ್ ಬೇಗ್ ನೇರ ಶಾಮೀಲು ಇದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ರುದ್ರೇಶ್ ಹತ್ಯೆ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಬೆಂಗಳೂರಿನ ಮಂತ್ರಿ ರೋಷನ್ ಬೇಗ್ ನೇರ ಶಾಮೀಲಾಗಿದ್ದಾರೆ. ಸಚಿವರ ಶಾಮೀಲು ಬಗ್ಗೆ ಹಲವು ಅಧಿಕಾರಿಗಳಿಗೆ ಗುಮಾನಿ ಇದೆ. ಮಂತ್ರಿ ರೋಷನ್ ಬೇಗ್ ಸುಪಾರಿ ಕೊಟ್ಟು ರುದ್ರೇಶ್ ಹತ್ಯೆ ಮಾಡಲಾಗಿದೆ.
 
 
ತಕ್ಷಣ ಸಚಿವ ರೋಷನ್ ಬೇಗ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಬೇಗ್ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲಾಗಿದೆ. ರುದ್ರೇಶ್ ಹತ್ಯೆ ತನಿಖೆ ಕೇಂದ್ರದ ಸಂಸ್ಥೆಯಿಂದ ಆಗಬೇಕು. ಪ್ರಕರಣದ ತನಿಖೆ ದುರ್ಬಲಗೊಳಿಸುವಂತೆ ಕರ್ನಾಟಕ ಪೊಲೀಸ್ ಅಧಿಕಾರಿಗಳ ಮೇಲೆ ಹಲವರ ಒತ್ತಡ ಬಿದ್ದಿದೆ.
ಬೆಂಗಳೂರಲ್ಲಿ ಹಾಡಹಗಲೇ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾಗಿತ್ತು.

LEAVE A REPLY

Please enter your comment!
Please enter your name here