ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿ- ಸೊರಕೆ

0
329

ಉಡುಪಿ ಪ್ರತಿನಿಧಿ ವರದಿ
ರೋಗ ಬಂದ ಮೆಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
 
ಅವರು ಸೋಮವಾರ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತವು ಪೋಲಿಯೋ ರೋಗ ಮುಕ್ತ ದೇಶವಾಗಿದೆ, ಆದರೆ ನೆರೆಯ ದೇಶಗಳಿಂದ ಪೋಲಿಯೋ ಹರಡುವ ಸಾಧ್ಯತೆಯಿರುವುದರಿಂದ, ಮುನ್ನೆಚ್ಚರಿಕೆಯಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಗೂ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಹೇಳಿದರು.
 
ಪ್ರಸ್ತಾವಿಕವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ, ಜನಿಸಿದ ಮಕ್ಕಳಿಗೆ 6 ನೇ ಮತ್ತು 14 ನೇ ವಾರದಲ್ಲಿ ಚುಚ್ಚುಮದ್ದು ಮೂಲಕ ಹಾಗೂ ಬಾಯಿ ಮೂಲಕ ಪೋಲಿಯೋ ಲಸಿಕೆ ನೀಡಲಿದ್ದು, ಇದರಿಂದ ಪೋಲಿಯೋ ವಿರುದ್ದ ಎರಡು ಪಟ್ಟು ರಕ್ಷಣೆ ಲಭ್ಯವಾಗಲಿದೆ.
 
ಚುಚ್ಚುಮದ್ದು ಮೂಲಕ ಪೋಲಿಯೋ ಲಸಿಕೆಯನ್ನು ನೀಡುವುದು , ಬಾಯಿ ಮೂಲಕ ನೀಡುವ ಪೋಲಿಯೋ ಲಸಿಕೆಗೆ ಬದಲಿಯಾಗಿ ಅಲ್ಲ, ಒಂದು ವೇಳೆ ನಮ್ಮ ದೇಶದಲ್ಲಿ ಪುನ: ಪೋಲಿಯೋ ಮರು ಕಾಣಿಸಿಕೊಂಡರೂ , ಈ ಎರಡೂ ಲಸಿಕೆ ನೀಡುವುದರಿಂದ ಪೋಲಿಯೋದಿಂದ ಉಂಟಾಗುವ ತೊಂದರೆಯನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
 
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಸರ್ಜನ್ ಡಾ. ಮಹೇಂದ್ರ, ರೋಟರಿಯ ಕಾರ್ಯದರ್ಶಿ ರಾಮಚಂದ್ರ ಉಪಾದ್ಯಾಯ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಂ.ಜಿ. ರಾಮ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ. ಕಿಶೋರಿ, ಅಮರನಾಥ ಶಾಸ್ತ್ರಿ, ರೋಟರಿಯ ಲಸಿಕಾ ಉಸ್ತುವಾರಿ ಮುಖ್ಯಸ್ಥ ಐ.ಕೆ ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು. ರೋಟರಿ ಅಧ್ಯಕ್ಷ ಪ್ರಭಾಕರ ಮಲ್ಯ ವಂದಿಸಿದರು.

LEAVE A REPLY

Please enter your comment!
Please enter your name here