ರೈಲ್ವೆ ದರೋಡೆಕೋರರ ಬಂಧನ

0
261

ರಾಯಚೂರು ಪ್ರತಿನಿಧಿ ವರದಿ
ರೈಲಿನಲ್ಲಿ ಪ್ರಯಾಣಿಕರಂತೆ ನಟಿಸಿ ದರೋಡೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ರೇಲ್ವೆ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
 
 
 
ಹರಿಯಾಣ ಮೂಲದ ಸುಲ್ತಾನ, ಮಹಾವೀರರು ಬಂಧಿತ ಆರೋಪಿಗಳಾಗಿದ್ದು, ಇವರು ಅಂತಾರಾಜ್ಯ ದರೋಡೆಕೋರರಾಗಿದ್ದಾರೆ. ಬಂಧಿತರಿಂದ 9 ಲಕ್ಷ ರೂಪಾಯಿ ಮೌಲ್ಯದ 334ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
 
 
 
ದರೋಡೆಕೋರರು ಹಂಪಿಗೆ ಬರುವ ಪ್ರವಾಸಿಗರನ್ನು ಟಾರ್ಗೆಟ್ ಮಾಡುತ್ತಿದ್ದರು. ರೈಲಿನ ಎಸಿ ಕೋಚ್ ಗಳಿಗೆ ನುಗ್ಗಿ ಪ್ರಯಾಣಿಕರ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ಹಂಪಿ ಎಕ್ಸ್ ಪ್ರೆಸ್, ಹೌರಾ ಅಮರಾವತಿ ಎಕ್ಸ್ ಪ್ರೆಸ್, ಹೈದರಾಬಾದ್ ಸೋಲ್ಹಾಪು ಎಕ್ಸ್ ಪ್ರೆಸ್ ನಲ್ಲಿ ದರೋಡೆ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here