ರೈಲು ರೋಖೋಗೆ ಮಿಶ್ರ ಪ್ರತಿಕ್ರಿಯೆ

0
335

ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಕನ್ನಡಪರ ಸಂಘಟನೆಯಿಂದ ರೈಲ್ವೆ ಬಂದ್ ಕರೆ ನೀಡಲಾಗಿದೆ. ರಾಜ್ಯದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ದೊರಕಿದೆ.
ಶಿವಮೊಗ್ಗ ರೇಲ್ವೆ ನಿಲ್ದಾಣದಲ್ಲಿ ರೈಲು ರೋಖೋಗೆ ಯತ್ನಿಸಿದ್ದಾರೆ. ಕರವೇ ಕಾರ್ಯಕರ್ತರು ರೈಲು ಸಂಚಾರ ತಡೆಗೆ ಯತ್ನಿಸಿದ್ದಾರೆ. ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರ ಬಂಧಿಸಲಾಗಿದೆ.
ಕನ್ನಡಪರ ಸಂಘಟನೆಗಳಿಂದ ರೈಲು ರೋಖೋ ಕರೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೇಂದ್ರ ರೇಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿಭದ್ರತೆ ಮಾಡಲಾಗಿದೆ. 2 ಕೆಎಸ್ ಆರ್ ಪಿ ತುಕಡಿ, ಮೂವರು ಇನ್ಸ್ ಪೆಕ್ಟರ್, ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.
 
ಬೆಂಗಳೂರಲ್ಲಿ ಎಂದಿನಂತೆ ರೈಲು ಸಂಚಾರ ನಡೆಯುತ್ತಿದೆ. ರೈಲ್ವೆ ತಡೆಗೆ ರೈಲ್ವೆ ಅಧಿಕಾರಿಗಳು ಅವಕಾಶ ನೀಡಿಲ್ಲ. ರೈಲುಗಳು ನಿಗದಿತ ಸಮಯಕ್ಕೆ ನಿಲ್ದಾಣದಿಂದ ಹೊರಡಲಿದೆ. ಸಾಂಕೇತಿಕವಾಗಿ 10ರಿಂದ 15 ನಿಮಿಷ ರೈಲು ತಡೆ ಸಾಧ್ಯತೆ ಇದೆ.
 
 
 
ಮಂಡ್ಯ ರೇಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಕದಂಬ ಸೇನೆಯ 6 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ರೇಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಮಾಡಲಾಗಿದೆ.
 
ಬೆಂಗಳೂರಲ್ಲಿ ಎಂದಿನಂತೆ ರೈಲು ಸಂಚಾರ ನಡೆಯುತ್ತಿದೆ. ರೈಲ್ವೆ ತಡೆಗೆ ರೈಲ್ವೆ ಅಧಿಕಾರಿಗಳು ಅವಕಾಶ ನೀಡಿಲ್ಲ. ರೈಲುಗಳು ನಿಗದಿತ ಸಮಯಕ್ಕೆ ನಿಲ್ದಾಣದಿಂದ ಹೊರಡಲಿದೆ. ಸಾಂಕೇತಿಕವಾಗಿ 10ರಿಂದ 15 ನಿಮಿಷ ರೈಲು ತಡೆ ಸಾಧ್ಯತೆ ಇದೆ. ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಸಶಸ್ತ್ರ ಸೀಮಾಬಲ, ಇಂಡೋ-ಟಿಬೆಟ್ ಬಾರ್ಡರ್ ಪೊಲಿಸ್, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ, ರೈಲ್ವೆ ಪೊಲೀಸರು, ಸಿವಿಲ್ ಪೊಲೀಸರು ಸೇರಿದಂತೆ ವಿವಿಧ ಪಡೆಗಳನ್ನು ನಿಯೋಜಿಸಲಾಗಿದೆ. ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸುತ್ತಿದೆ.
 
 
ಮೈಸೂರು ರೇಲ್ವೆ ನಿಲ್ದಾಣದಲ್ಲಿ ರೈಲ್ವೆ ಬಂದ್ ನ ಬಿಸಿ ತಟ್ಟಲಿಲ್ಲ. ಬೆಳಗ್ಗೆ 6 ಗಂಟೆಯಿಂದ ನಿಗದಿಯಂತೆ ರೈಲುಗಳ ಸಂಚಾರ ನಡೆದಿದೆ. ಚಾಮುಂಡಿ ಎಕ್ಸ್ ಪ್ರೆಸ್, ಅರಸೀಕೆರೆ ಎಕ್ಸ್ ಪ್ರೆಸ್, ಚಾಮರಾಜನಗರ ಎಕ್ಸ್ ಪ್ರೆಸ್ ರೈಲು ಸಂಚಾರ ಯಥಾಸ್ಥಿತಿಯಲ್ಲಿ ನಡೆದಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರೈಲು ಸಂಚಾರ ಯಥಾಸ್ಥಿತಿಯಿದ್ದರೂ ಜನರ ಸಂಖ್ಯೆ ವಿರಳವಾಗಿದೆ.ಪ್ರಯಾಣಿಕರು ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ.

LEAVE A REPLY

Please enter your comment!
Please enter your name here