ರೈಲು ದುರಂತ: ಮಾಸ್ಟರ್ ಮೈಂಡ್ ಬಂಧನ

0
243

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣದ ಮಾಸ್ಟರ್ ಮೈಂಡ್ ನ ಬಂಧನವಾಗಿದೆ. ನೇಪಾಳದ ಕಠ್ಂಡುನಲ್ಲಿ ಪಾಕ್ ನ ಶಂಷುಲ್ ಹೊದಾನನ್ನು ಬಂಧಿಸಲಾಗಿದೆ.
 
shamshula huda
 
ಶಂಷುಲ್ ಹೊದಾ ಪಾಕ್ ಐಎಸ್ ಐ ಏಜೆಂಟ್ ಆಗಿದ್ದು, ಕಠ್ಮಂಡು ಏರ್ ಪೋರ್ಟ್ ನಲ್ಲಿ ಹೊದಾನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಈತ ದುಬೈಯಿಂದ ನೇಪಾಳಕ್ಕೆ ಬಂದಿದ್ದ.  ಈತನಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಯೂ ನಂಟಿದೆ ಎನ್ನಲಾಗಿದೆ. ಈಗಾಗಲೇ ಭಾರತದ ಗುಪ್ತಚರ, ತನಿಖಾ ಸಂಸ್ಥೆಗಳು(IB, RAW, NIA) ಕಠ್ಮಂಡು ತಲುಪಿದ್ದು, ಶಂಷುಲ್ ನ್ನು ವಶಕ್ಕೆ ಪಡೆಯಲಿದ್ದಾರೆ.
 
 
 
2016ರ ನವೆಂಬರ್ 20ರಂದು ಉತ್ತರಪ್ರದೇಶದ ಕಾನ್ಪುರ್ ಬಳಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತ ಸಂಭವಿಸಿತ್ತು. ದುರಂತದಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದರು.
ದುರಂತದ ಹಿಂದೆ ಉಗ್ರರ ಕೈವಾಡ ಇರುವುದು ದೃಢಪಟ್ಟಿತ್ತು. ಘಟನೆ ಸಂಬಂಧ ಬಿಹಾರದಲ್ಲಿ ಬಂಧಿಸಲಾಗಿದ್ದ ಮೂವರಿಂದ ವಿಷಯ ಬಹಿರಂಗವಾಗಿದೆ. ಪಾಕ್ ಮೂಲದ ಉಗ್ರರ ಕೈವಾಡದ ಬಗ್ಗೆ ಬಹಿರಂಗವಾಗಿತ್ತು.

LEAVE A REPLY

Please enter your comment!
Please enter your name here