ರೈಲುಗಳು ಮುಖಾಮುಖಿ ಡಿಕ್ಕಿ

0
231

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಎರಡು ಪ್ರಯಾಣಿಕರ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 13ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನದ ಲಂದಿ ಪ್ರದೇಶದ ಗಡಾಸಿ ಪಟ್ಟಣದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
 
 
ಜಕಾರಿಯ ಎಕ್ಸ್‍ಪ್ರೆಸ್‍ನ ಮೂರು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಗಾಯಾಗಳು ಜಿಮ್ನಾ ಆಸ್ಪತ್ರೆ, ಅಬ್ಬಾಸಿ ಸಯೀದ್ ಆಸ್ಪತ್ರೆ ಮತ್ತು ಸಿವಿಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
 
ದೋಷಪೂರಿತ ಸಿಗ್ನಲ್‍ನಿಂದಾಗಿ ಫರೀದ್ ಎಕ್ಸ್‍ಪ್ರೆಸ್ ಮತ್ತು ಜಕಾರಿಯ ಎಕ್ಸ್‍ಪ್ರೆಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ರೈಲುಗಳ ಭಗ್ನಾವಶೇಷಗಳಡಿ ಇನ್ನು ಅನೇಕರು ಸಿಲುಕಿರುವ ಸಂಖ್ಯೆಯಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

LEAVE A REPLY

Please enter your comment!
Please enter your name here