ರೈಲಿನಲ್ಲಿ ಮಕ್ಕಳಿಗಾಗಿ ವಿಶೇಷ ಆಹಾರ ಲಭ್ಯ

0
541

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ತಾಯಂದಿರು ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಮಕ್ಕಳಿಗೆ ಯಾವ ತಿಂಡಿ ಕೊಡುವುದು, ಹೊರಗಿನ ತಿಂಡಿ ಕೊಟ್ಟರೆ ಎಲ್ಲಿ ಮಕ್ಕಳ ಆರೋಗ್ಯ ಕೆಡುತ್ತೋ ಎಂದು ಚಿಂತಿಸಬೇಕಿಲ್ಲ.
 
ಹೌದು, ಇನ್ನು ಮಕ್ಕಳಿಗೆಂದೇ ರೈಲು ನಿಲ್ದಾಣಗಳಲ್ಲಿ ಬಿಸಿ ಹಾಲು, ಬಿಸಿ ನೀರು ಮತ್ತು ಶಿಶು ಆಹಾರಗಳನ್ನು ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಆರಂಭದಲ್ಲಿ 25 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಆರಂಭವಾಗಲಿದೆ.
 
ಜನನಿ ಸೇವಾ ಹೆಸರಿನಲ್ಲಿ ಈ ಸೌಲಭ್ಯ ದೆಹಲಿ, ಮುಂಬೈ, ಸಿಎಸ್ ಟಿಎಂ, ಮುಂಬೈ ಸೆಂಟ್ರಲ್, ಹೌರಾ, ಚೆನ್ನೈ ಸೆಂಟ್ರಲ್, ನಾಗ್ಪುರ, ಪುಣೆ, ಸೂರತ್, ಲಕ್ನೋ ಮತ್ತು ಮೊರದಾಬಾದ್ ಸೇರಿದಂತೆ ಒಟ್ಟು 25 ನಿಲ್ದಾಣಗಳಲ್ಲಿ ಆರಂಭವಾಗಲಿದೆ.
 
 
25 ರೈಲು ನಿಲ್ದಾಣಗಳ ಮೂಲಕ ಹಾದುಹೋಗುವ ರೈಲುಗಳಲ್ಲಿ ಮಕ್ಕಳ ಆಹಾರವನ್ನು ಸೇರ್ಪಡೆ ಮಾಡಿದ್ದು, 5ರಿಂದ 12 ವರ್ಷದವರೆಗಿನ ಮಕ್ಕಳಿಗೆ ಇ-ಕ್ಯಾಟರಿಂಗ್ ಮೂಲಕ ನೀಡಲಾಗುತ್ತದೆ ಇಲ್ಲವೇ ಪ್ರಯಾಣಿಕರು ನೇರವಾಗಿ ಖರೀದಿಸಬಹುದು. ಐಆರ್ ಸಿಟಿಸಿಯ ಇ-ಕ್ಯಾಟರಿಂಗ್ ವೆಬ್ ಸೈಟ್ ಮೂಲಕ ಪ್ರಯಾಣಿಕರು ಊಟಕ್ಕೆ ಆರ್ಡರ್ ಮಾಡಬಹುದು. ಇದಕ್ಕಾಗಿ ನಿಗದಿತ ದೂರವಾಣಿ ಸಂಖ್ಯೆ, ಎಸ್ ಎಂಎಸ್, ಮೊಬೈಲ್ ಆಪ್ ಮತ್ತು ಟೋಲ್ ಫ್ರೀ ಸಂಖ್ಯೆ 1323 ಇದೆ.

LEAVE A REPLY

Please enter your comment!
Please enter your name here