ರೈತ ಸಜೀವ ದಹನ

0
168

ಹಾಸನ ಪ್ರತಿನಿಧಿ ವರದಿ
ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನವಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಗಂಜಿಕರೆ ಗ್ರಾಮದಲ್ಲಿ ಸಂಭವಿಸಿದೆ. ಪುಟ್ಟಸ್ವಾಮಿ ಗೌಡ ಸಜೀವ ದಹನವಾದ ರೈತ.
 
 
ನಿನ್ನೆ ರಾತ್ರಿ ಜಮೀನಿನಲ್ಲಿದ್ದ ತೇಗದ ಮರಕ್ಕೆ ಬೆಂಕಿ ತಗುಲಿತ್ತು. ಇದರಿಂದ ಜಮೀನಿನಲ್ಲಿದ್ದ ಹುಲ್ಲು, ಕುರುಚಲು ಗಿಡಗಳಿಗೆ ಬೆಂಕಿ ಹರಡಿಕೊಂಡಿತ್ತು. ಇದನ್ನು ನಂದಿಸಲು ಹೋದ ರೈತ ತನ್ನ ಜಮೀನಿನಲ್ಲೇ ಸಜೀವ ದಹನವಾಗಿದ್ದಾನೆ.
ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here