ರೈತರ ಸಾಲ ಮನ್ನಾ ಮಾಡುವ ಬಗ್ಗೆ

0
352

ಮೂಡಬಿದಿರೆ ಪ್ರತಿನಿಧಿ ವರದಿ
ರಾಜ್ಯಾದ್ಯಂತ ಬರಪರಿಸ್ಥಿತಿಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು, ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಸ್ಪಂದಿಸಬೇಕು. ಹಾಗೂ ಸಾಲ ಮನ್ನಾ ಮಾಡಬೇಕು. ಮುಂದಿನ ಬಜೆಟ್ ನಲ್ಲಿ ಸಾಲಮನ್ನಾ ಮಾಡುವ ಉದ್ದೇಶಕ್ಕಾಗಿ ಹಣ ಮೀಸಲಿಡಬೇಕು. ಬರಪರಿಸ್ಥಿತಿಯಿಂದಾಗಿ ಮೇವಿನ ಕೊರತೆಯುಂಟಾಗಿ ರೈತರ ಗೋವುಗಳು ಸಾವಿಗೀಡಾಗುತ್ತಿದೆ. ತಕ್ಷಣ ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು ಮೇವು ಪೂರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಗುರುವಾರ ಮೂಡಬಿದಿರೆ ತಹಶೀಲ್ದಾರರ ಮೂಲಕ ನೀಡಿದ ಮನವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ನೀರಿನ ಸೌಲಭ್ಯ ಒದಗಿಸಬೇಕು; ರಾಜ್ಯದಲ್ಲಿ ಈವರೆಗೂ ಎಂದೂ ನೋಡದಂತಹ ಬರಗಾಲ ಕಳೆದ 2 ವರ್ಷಗಳಿಂದಲೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಾಲವನ್ನು ಮನ್ನ ಮಾಡುವಂತೆ ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿದೆ.
 
 
 
ಮಂಡಲ ಅಧ್ಯಕ್ಷ ಈಶ್ವರ್ ಕಟೀಲು, ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಯಂ., ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಮುಖಂಡರಾದ ಕೆ.ಆರ್ ಪಂಡಿತ್, ಬಾಹುಬಲಿಪ್ರಸಾದ್, ಪ್ರಸಾದ್ ಕುಮಾರ್, ಮೇಘನಾಥ ಶೆಟ್ಟಿ, ಶಶಿಧರ್ ಅಂಚನ್, ಜಯಂತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಜಾಯ್ಲೊಸ್ ಡಿ’ಸೋಜ, ಹಿಂ.ವರ್ಗ ಮೋರ್ಚಾ ಗೋಪಾಲ್ ಶೆಟ್ಟಿಗಾರ್, ರೈತ ಮೋರ್ಚಾ ಅಧ್ಯಕ್ಷ ಜೀತೇಂದ್ರ ಶೆಟ್ಟಿ, ಶಕ್ತಿ ಕೇಂದ್ರದ ರಮೇಶ್, ಹರೀಶ್ ಎಂ.ಕೆ., ಸಂತೋಷ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here