ರೈತರ ಆತ್ಮಹತ್ಯೆಗೆ ದೆವ್ವ-ಭೂತಗಳು ಕಾರಣವೆಂದು ಸಚಿವ

0
245

ವರದಿ : ಲೇಖಾ
ರೈತರ ಸರಣಿ ಆತ್ಮಹತ್ಯೆಗಳಿಗೆ ದೆವ್ವ-ಭೂತಗಳು, ಬಾನಾಮತಿ ಕಾರಣ ಎಂದು ಮಧ್ಯ ಪ್ರದೇಶದ ಗೃಹ ಸಚಿವ ಭೂಪೇಂದರ್ ಸಿಂಗ್ ಠಾಕೂರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
 
 
ಮಧ್ಯ ಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಳಿಂದ ಸುಮಾರು 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿಧಾನಸಭಾ ಕಲಾಪದ ವೇಳೆ ಕಾಂಗ್ರೆಸ್ ಶಾಸಕ ಶೈಲೈಂದರ್ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಸರ್ಕಾರ ಇಂತಹ ಉತ್ತರ ನೀಡಿದೆ.
 
 
ಸೆಹೋರ್ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ನಡೆದಿರುವ ರೈತರ ಆತ್ಮಹತ್ಯೆಗೆ ದೆವ್ವ ಮತ್ತು ಭಾನಾಮತಿ ಕಾಟವೇ ಕಾರಣ ಎಂದು ಸರ್ಕಾರ ಸದನಕ್ಕೆ ಲಿಖಿತ ಉತ್ತರ ನೀಡಿದೆ.
 
 
ಸೆಹೋರ್ ಜಿಲ್ಲೆಯಲ್ಲಿ ನಡೆದ 418 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 117 ಆತ್ಮಹತ್ಯೆ ಪ್ರಕರಣಗಳು ದೆವ್ವ-ಭೂತ ಮತ್ತು ಭಾನಾಮತಿ ಕಾರಣ ಎಂದು ಭೂಪೇಂದರ್ ಸಿಂಗ್ ಠಾಕೂರ್ ಉತ್ತರಿಸಿದ್ದಾರೆ. ಗೃಹ ಸಚಿವರ ಉತ್ತರ ನೀಡುತ್ತಿದ್ದಂತೆಯೇ ಇಡೀ ಸದನವೇ ನಿಬ್ಬೆರಗಾಗಿಹೋಯಿತು.
 
 
ಸದನದ ಸದಸ್ಯರು ಈ ಬಗ್ಗೆ ಗೃಹ ಸಚಿವರು ಹೆಚ್ಚಿನ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಗೃಹ ಸಚಿವ, ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಜಾರಿಕೊಂಡರು.

LEAVE A REPLY

Please enter your comment!
Please enter your name here