ರೈತರಿಗೆ ಬಿಡುಗಡೆ ಭಾಗ್ಯ

0
156

ಧಾರವಾಡ ಪ್ರತಿನಿಧಿ ವರದಿ
ಕೊನೆಗೂ ಮಹದಾಯಿ ಹೋರಾಟಗಾರರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇಂದು ಹೋರಾಟಗಾರರಿಗೆ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
 
 
ಬಳ್ಳಾರಿ ಜೈಲಿನಿಂದ ಧಾರವಾಡ ಜಿಲ್ಲೆಯ ನವಲಗುಂದ ಮೂಲದ 129 ರೈತರು ಬಿಡುಗಡೆಯಾಗಲಿದ್ದಾರೆ. ನವಲಗುಂದ ರೈತರ ಪೈಕಿ ಇಂದು ಓರ್ವನ ಬಿಡುಗಡೆ ಇಲ್ಲ. ಜಾಮೀನು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಇಲ್ಲ. ಹೀಗಾಗಿ ರೈತ ಇಬ್ರಾಹಿಂ ಸಾಬ್ ಜೈಲಿನಲ್ಲೇ ಉಳಿಯಲಿದ್ದಾರೆ.
 
 
ಬಳ್ಳಾರಿಯ ಜೈಲಿನಲ್ಲಿ ಒಟ್ಟು 149 ರೈತರನ್ನು ಬಂಧಿಸಲಾಗಿತ್ತು. ಅದರಲ್ಲಿ 129 ಬಂಧಿತರು ನವಲಗುಂದ ರೈತರಾಗಿದ್ದಾರೆ. ಗದಗದ ಉಳಿದ 16 ರೈತರು ಆಗಸ್ಟ್ 16ರಂದು ಬಿಡುಗಡೆಯಾಗಲಿದ್ದಾರೆ. ಈಗಾಗಲೇ ಗದಗದ ಮೂವರು ರೈತರನ್ನು ಬಿಡುಗಡೆಯಾಗಿದ್ದಾರೆ. ಧಾರವಾಡ ಕೋರ್ಟ್ ಎಲ್ಲಾ ರೈತರಿಗೂ ಜಾಮೀನು ನೀಡಿದೆ.
 
 
ಮಹದಾಯಿ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರನ್ನು ಬಂಧನ ಮಾಡಲಾಗಿತ್ತು. ನಿನ್ನೆ ಧಾರವಾಡ ಕೋರ್ಟ್ ಈ ರೈತನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.
ರೈತರನ್ನು ಕರೆದೊಯ್ಯಲು ನವಲಗುಂದ ಜೆಡಿಎಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ಆಗಮಿಸಿದ್ದಾರೆ.
 
 
ಚಿತ್ರದುರ್ಗದಲ್ಲೂ ಇಂದು ಮಹದಾಯಿ ಹೋರಾಟಗಾರರು ಬಿಡುಗಡೆಯಾಗಲಿದ್ದಾರೆ. ಚಿತ್ರದುರ್ಗ ಜೈಲಿನಿಂದ ಒಟ್ಟು 57 ರೈತರು ಬಿಡುಗಡೆಯಾಲಿದ್ದಾರೆ. ಈ ರೈತರು ಧಾರವಾಡ ಮೂಲದವರಾಗಿದ್ದು, ಇವರು ಎರಡು ಬಸ್ ಗಳಲ್ಲಿ ನವಲಗುಂದಕ್ಕೆ ತೆರಳಲಿದ್ದಾರೆ. ಮುರುಘಾ ಮಠದ ವತಿಯಿಂದ ರೈತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ರೈತರಿಗೂ ಧಾರವಾಡ ಕೋರ್ಟ್ ಜಾಮೀನು ನೀಡಿದೆ.

LEAVE A REPLY

Please enter your comment!
Please enter your name here