ರೇಖಾ ಶರ್ಮಾ ಹೇಳಿಕೆಗೆ ಖಂಡನೆ

0
237

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು ಪೊಲೀಸರಿಗೆ ಹಿಂದಿ ಕಲಿಸಿ” ಎಂದಿರುವ ರೇಖಾ ಶರ್ಮಾ ಹೇಳಿಕೆಗೆ ಖಂಡನೆ
ಐ.ಟಿ., ಬಿ.ಟಿ. ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಕಾನ್ಸ್ಟೇಬಲ್ ಗಳು ಹಿಂದಿ ಕಲಿಯಬೇಕು, ಇಲ್ಲದಿದ್ದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಹೊರರಾಜ್ಯದವರಿಗೆ ತೊಂದರೆಯಾಗುತ್ತದೆಂದು ಹೇಳಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ರೇಖಾ ಶರ್ಮಾ ಅವರ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.
 
 
ಆಯಾ ರಾಜ್ಯದಲ್ಲಿ ವಾಸಿಸುವವರು ಸ್ಥಳೀಯ ಭಾಷೆ ಕಲಿತು ಅಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕೆಂದು ರೇಖಾ ಶರ್ಮಾ ಹೇಳಿದ್ದರೆ ಒಳ್ಳೆಯದಾಗುತ್ತಿತ್ತು. ಆಗ ನಾವು ಅವರನ್ನು ಅಭಿನಂದಿಸುತ್ತಿದ್ದೆವು. ಆದರೆ ರೇಖಾ ಶರ್ಮಾ ಅವರು ಹಿಂದಿಯನ್ನು ಕಲಿಸಿರಿ ಎಂದು ಹೇಳುವ ಮೂಲಕ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಲು ಹೊರಟಿರುವುದು ನೋವಿನ ಸಂಗತಿ. ಇಂಥ ದುರದೃಷ್ಟಕರ ಹಾಗೂ ಖಂಡನೀಯ ಹೇಳಿಕೆಯನ್ನು ಅವರು ವಾಪಸ್ಸು ಪಡೆಯಬೇಕೆಂದು ಪರಿಷತ್ತು ಒತ್ತಾಯಿಸಿದೆ.

LEAVE A REPLY

Please enter your comment!
Please enter your name here