ರೆಸ್ಟೋರೆಂಟ್ ಮೇಲೆ ಉಗ್ರ ಅಟ್ಟಹಾಸ

0
255

 
ಅಂತರಾಷ್ಟ್ರೀಯ ಪ್ರತಿನಿಧಿ ವರದಿ
26/11 ಮುಂಬೈ ದಾಳಿಯ ಮಾದರಿಯಲ್ಲಿ ಉಗ್ರರು ಬಾಂಗ್ಲಾದೇಶದಲ್ಲಿ ದಾಳಿ ನಡೆಸಿದ್ದಾರೆ. ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
 
 
ವಿದೇಶಿಯರೇ ಹೆಚ್ಚಾಗಿ ಉಳಿದುಕೊಳ್ಳುವ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿರುವ ಉಗ್ರರು 35ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಉಗ್ರರ ದಾಳಿ ಹಿನ್ನೆಲೆ ರೆಸ್ಟೋರೆಂಟ್ ಸುತ್ತುವರೆದಿರುವ ಬಾಂಗ್ಲಾದೇಶ ಭದ್ರತಾ ಪಡೆ ಉಗ್ರರ ಧಮನಕ್ಕೆ ಮುಂದಾಗಿದ್ದಾರೆ.
 
 
ಉಗ್ರರ ಧಮನ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಮೃತಪಟ್ಟಿದ್ದು, ಇಬ್ಬರು ಬಾಂಗ್ಲಾದೇಶಿಗರನ್ನು ರಕ್ಷಿಸಲಾಗಿದೆ. ಬೆಳಗ್ಗೆ 7.40ರ ಸುಮಾರಿಗೆ ಭದ್ರತಾ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here